ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆ – ನಾಯಕ: ಅನ್ವಿತ್ ಬಿ.ಕೆ, ಉಪನಾಯಕಿ: ಖತೀಜತ್ ಲಿಬಾ

0

ಪುತ್ತೂರು: 2026-27ನೇ ಸಾಲಿನ ಶಾಲಾ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕಿಯ ಸ್ಥಾನಕ್ಕೆ ಚುನಾವಣೆ ಜೂ.11ರಂದು ನಡೆಯಿತು. ಪ್ರತಿ ಸ್ಥಾನಕ್ಕೂ ತಲಾ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶಾಲಾ ನಾಯಕನಾಗಿ 10ನೇ ತರಗತಿಯ ಅನ್ವಿತ್ ಬಿ.ಕೆ., ಹಾಗೂ ಉಪನಾಯಕಿಯಾಗಿ 9ನೇ ತರಗತಿಯ ಖತೀಜತ್ ಲಿಬಾ ಆಯ್ಕೆಯಾಗಿದ್ದಾರೆ.

ಮುಖ್ಯಚುನಾವಣಾ ಅಧಿಕಾರಿಯಾಗಿ ಶಾಲಾ ಮುಖ್ಯೋಪಾಧ್ಯಾಯರಾದ ವಂ|ಮ್ಯಾಕ್ಸಿಮ್ ಡಿಸೋಜಾರವರು ಮಾರ್ಗದರ್ಶನ ನೀಡಿದರು. ಸಹಾಯಕ ಚುನಾವಣಾ ಅಧಿಕಾರಿಯಾಗಿ ರೇಷ್ಮಾ ಮೇರಿ ರೆಬೆಲ್ಲೊ ಮತ್ತು ನರೇಶ್ ಲೋಬೊರವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು. ವಿದ್ಯಾರ್ಥಿಗಳಿಗೆ ಶಾಲೆಯು ಹೊರಡಿಸಿದ ಗುರುತಿನ ಚೀಟಿಯನ್ನು ತೋರಿಸುವುದರ ಮೂಲಕ ಮತದಾನಕ್ಕೆ ಅವಕಾಶ ನೀಡಲಾಯಿತು.

LEAVE A REPLY

Please enter your comment!
Please enter your name here