







ಪುತ್ತೂರು: ಕೊಂಬೆಟ್ಟಿನಲ್ಲಿರುವ ದ್ರಾವಿಡ ಬ್ರಾಹ್ಮಣರ ವಿದ್ಯಾರ್ಥಿ ಭವನದ ಹಾಲ್‌ನಲ್ಲಿ ಜೂ.21 ರಂದು ಬೆಳಿಗ್ಗೆ 11.30 ರಿಂದ ಸಂಜೆ 3 ರ ತನಕ ಪೆಂಡುಲಮ್ ಡೌಸಿಂಗ್ ತರಬೇತಿ ಶಿಬಿರ ಹಾಗೂ ಸಂಜೆ 3 ರಿಂದ 5 ರ ತನಕ ಏಂಜಲ್ಸ್ ಥೆರಪಿ ತರಬೇತಿ ಶಿಬಿರ ನಡೆಯಲಿದೆ.


ಇದರಲ್ಲಿ ಪೆಂಡುಲಮ್ ಹಾಗೂ ಏಂಜಲ್ಸ್ ಗಳನ್ನು ಉಪಯೋಗಿಸಿ ರೋಗಗಳನ್ನು ಕಂಡು ಹಿಡಿಯುವುದು, ಭವಿಷ್ಯವಧಾನ, ರೋಗಗಳಿಗೆ ಚಿಕಿತ್ಸೆ, ಹಣಕಾಸಿನ ಅಭಿವೃದ್ಧಿ, ಸಂಬಂಧಗಳ ಸುಧಾರಣೆ, ನೀರಿನ ಸೆಲೆ ಕಂಡು ಹಿಡಿಯುವುದು, ವಾಸ್ತು ದೋಷ ನಿವಾರಣೆ, ಮ್ಯಾಚ್ ಮೇಕಿಂಗ್, ಗುಪ್ತನಿಧಿ ಪತ್ತೆ, ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಲಾಗುವುದು. ಇದನ್ನು ಮಂಗಳೂರು ಕಿನ್ನಿಗೋಳಿಯ ಕಣ್ಣಿನ ತಜ್ಞ ಡಾ. ನಿತ್ಯಾನಂದ ಎ. ಶೆಟ್ಟಿಯವರು ನಡೆಸಿಕೊಡಲಿದ್ದಾರೆ. ನೊಂದಾವಣೆಗೆ 9744275999, 9449639340 ಕ್ಕೆ ಸಂಪರ್ಕಿಸುವಂತೆ ಅಥವಾ www.nityayoga.in ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.












