3395 ಕಾನ್ಸ್ಟೇಬಲ್ ಹುದ್ದೆಗಳಿಗೆ ಜೂ.16ರಿಂದ ತರಬೇತಿ ಪ್ರಾರಂಭಿಸಲಿದೆ ವಿದ್ಯಾಮಾತಾ ಅಕಾಡೆಮಿ- ನೇರ ತರಗತಿ ಮತ್ತು ಆನ್ಲೈನ್ ತರಗತಿಗಳ ಮೂಲಕ ತರಬೇತಿ ನೀಡಲಿರುವ ಸಂಸ್ಥೆ

0

ಪುತ್ತೂರು :ಕಳೆದ ಹಲವು ವರ್ಷಗಳ ಅವಧಿಯಲ್ಲಿ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಈಗಾಗಲೇ ಪ್ರಾರಂಭವಾಗಿರುವ 2026ನೇ ಸಾಲಿನ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ನೇಮಕಾತಿಯ ಆಯ್ಕೆ ಪ್ರಕ್ರಿಯೆಗಳಿಗೆ ಪೂರಕವಾಗಿ ವಿದ್ಯಾಮಾತಾ ಅಕಾಡೆಮಿಯು ನೇರ ತರಗತಿ ಮತ್ತು ಆನ್ಲೈನ್ ತರಗತಿಗಳ ಮೂಲಕ ತರಬೇತಿಯನ್ನು ನೀಡಲಿದ್ದು, ಜೂ.16 ರಿಂದ ತರಬೇತಿಗಳು ಪ್ರಾರಂಭವಾಗಲಿದೆ.


ಕರ್ನಾಟಕ ಪೊಲೀಸ್, ಭಾರತೀಯ ರಕ್ಷಣಾ ಪಡೆಗಳು ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳ ನೇಮಕಾತಿಗಳಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ 100ಕ್ಕೂ ಮಿಕ್ಕಿದ ಅಭ್ಯರ್ಥಿಗಳು ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು, ಈ ಯಶಸ್ಸನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಈ ಅಹೋರಾತ್ರಿ ತರಬೇತಿಯ ಸದುಪಯೋಗವನ್ನು ಪಡೆದುಕೊಂಡು ಪೊಲೀಸ್ ನೌಕರಿಯನ್ನು ಪಡೆದುಕೊಳ್ಳಲು ಸುವರ್ಣಾವಕಾಶ ಯುವ ಜನತೆಗೆ ಅವಕಾಶ ಕಲ್ಪಿಸಲಾಗಿದೆ.

ಈ ರೀತಿ ನಡೆಯಲಿದೆ ವಿದ್ಯಾಮಾತಾದ ತರಬೇತಿ
ಸದ್ಯ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ / ಉದ್ಯೋಗ ಮಾಡುತ್ತಿರುವವರಿಗೂ ತರಬೇತಿ ಪಡೆದುಕೊಳ್ಳಲು ಅವಕಾಶ.
ವಸತಿ ಸೌಲಭ್ಯದೊಂದಿಗೆ 24×7 ಮಾದರಿಯ ತರಬೇತಿ ನೀಡಲಿರುವ ವಿದ್ಯಾಮಾತಾ.
ನೇರ ತರಗತಿ ಮತ್ತು ಆನ್ಲೈನ್ ತರಗತಿಯ ಮೂಲಕ ನಡೆಯಲಿರುವ ತರಬೇತಿಯ ಜೊತೆಗೆ ಅಧ್ಯಯನ ಸಾಮಾಗ್ರಿ(Study Meterials) ಕೂಡ ಸಿಗಲಿದೆ.
24×7 ಲೈಬ್ರರಿ ವ್ಯವಸ್ಥೆ ಕೂಡ ಲಭ್ಯವಿದೆ.
ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆಗಳು ಇರುತ್ತದೆ.
ಸದ್ಯ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು/ಖಾಸಗಿ ಉದ್ಯೋಗಿಗಳು ಸಂಜೆ ಬಂದು ವಸತಿ ಸೌಲಭ್ಯವನ್ನು ಉಪಯೋಗಿಸಿಕೊಂಡು ರಾತ್ರಿ ತರಬೇತಿಯನ್ನು ಪಡೆದುಕೊಂಡು ಹೋಗಲು ಅವಕಾಶವಿದೆ.

ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತೆ
ಪಿ ಯು ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
ವಯಸ್ಸಿನ ಮಿತಿ: ಕನಿಷ್ಠ: 18 ವರ್ಷ
ಗರಿಷ್ಠ: 33(ಸಾಮಾನ್ಯ ಅಭ್ಯರ್ಥಿಗಳಿಗೆ), 35ವರ್ಷ(OBC, SC, ST)
ದೈಹಿಕ ಸಾಮರ್ಥ್ಯ: 168cm ಎತ್ತರ(ಪುರುಷ ಅಭ್ಯರ್ಥಿ), 157cm ಎತ್ತರ(ಮಹಿಳಾ ಅಭ್ಯರ್ಥಿ)

  • ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು
    ಫೋಟೋ,ಅಂಕಪಟ್ಟಿಗಳು,ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ಪ್ರಮಾಣ ಪತ್ರ. ಅರ್ಜಿ ಸಲ್ಲಿಸಲು ಜು.3ರಂದು ಕೊನೆಯ ದಿನಾಂಕವಾಗಿರುತ್ತದೆ

ವಿದ್ಯಾಮಾತಾ ಅಕಾಡೆಮಿಯಲ್ಲಿ ದಾಖಲಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ತರಬೇತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಪುತ್ತೂರಿನ APMC ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಬಹುದು ಅಥವಾ 9620468869 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here