






ಪುತ್ತೂರು: ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲಿನಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಧ್ಯೇಯವಾಕ್ಯದಂತೆ ‘ತಾಯಿಯ ಹೆಸರಿನಲ್ಲಿ ಒಂದು ಗಿಡ’ ನೆಡುವ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.





ಪರಿಸರ ದಿನದ ಮಹತ್ವವನ್ನು ಶಾಲಾ ಮುಖ್ಯ ಗುರುಗಳಾದ ಸಿಂಧು ವಿ. ಜಿ. ತಿಳಿಸಿದರು. ಪ್ರತಿಯೊಬ್ಬ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ನರ್ಸರಿಯಿಂದ ವಿವಿಧ ಜಾತಿಯ ಔಷಧೀಯ ಮತ್ತು ಹಣ್ಣಿನ ಗಿಡಗಳನ್ನು ತಂದು ಶಾಲೆಯ ಆವರಣದಲ್ಲಿ ನೆಡುವ ಮೂಲಕ ಪರಿಸರ ದಿನಾಚರಣೆ ಹಾಗೂ ಹಸಿರು ಪರಿಸರದ ಧ್ಯೇಯ ವಾಕ್ಯವನ್ನು ದೃಢಗೊಳಿಸಿದರು. ಈ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಸ್ಕೌಟ್ ಗೈಡ್ ಶಿಕ್ಷಕಿ ಶ್ರೀಮತಿ ಪ್ರಫುಲ್ಲರವರು ವಹಿಸಿದರು.










