ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೈಕೋರ್ಟ್ ನ್ಯಾಯಾಧೀಶ ಟಿ ಎಮ್ ನಡಾಫ್ ಭೇಟಿ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೈಕೋರ್ಟ್ ನ್ಯಾಯಾಧೀಶ ಟಿ ಎಮ್ ನಡಾಫ್ ಅವರು ದಂಪತಿ ಸಮೇತರಾಗಿ ಭೇಟಿ ನೀಡಿದರು.


ದೇವಳದಲ್ಲಿ ಶ್ರೀ ದೇವರ ಅಭಿಷೇಕಕ್ಕೆ ಶುದ್ಧ ಎಳ್ಳೆಣ್ಣೆ ಸಮರ್ಪಣೆ ಮಾಡಿ, ತುಪ್ಪ ದೀಪ ಬೆಳಗಿಸಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಪ್ರಾರ್ಥನೆ ಮಾಡಿ ಪ್ರಸಾದ ನೀಡಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದೇವಳದ ಗೌರವಾರ್ಥವಾಗಿ ಶಾಲು ಹೊದೆಸಿ ಗೌರವಿಸಿದರು. ಈ ಸಂದರ್ಭ ವಕೀಲರ ಸಂಘದ ಅಧ್ಯಕ್ಷ ಜಿ ಜಗನ್ನಾಥ ರೈ, ವಕೀಲ ನರಸಿಂಹ ಪ್ರಸಾದ್, ಕೋರ್ಟ್ ಪ್ರೊಟೋಕಾಲ್ ಅಧಿಕಾರಿ ಪಾಂಡುರಂಗ ಜೊತೆಗಿದ್ದರು.

LEAVE A REPLY

Please enter your comment!
Please enter your name here