ಪುತ್ತೂರು ತಾಲ್ಲೂಕು ಮಹಿಳಾ ಬಂಟರ ವಿಭಾಗದ ಮಾಸಿಕ ಸಭೆ ಹಾಗೂ ಮಹಿಳಾ ಮತ್ತು ಯುವ ವಿಭಾಗದಿಂದ ಚಾವಡಿ ಸನ್ಮಾನ

0

ಪುತ್ತೂರು : ಬಂಟರ ಸಂಘ ಪುತ್ತೂರು ತಾ| ಇದರ ಮಹಿಳಾ ವಿಭಾಗದ ಮಾಸಿಕ ಸಭೆ ಮತ್ತು ಮಹಿಳಾ ಮತ್ತು ಯುವ ಬಂಟರ ವಿಭಾಗದಿಂದ ಜೂ. 16 ರಂದು ಚಾವಡಿ ಸಮ್ಮಾನ ಪುತ್ತೂರು ಎಂ.ಸುಂದರರಾಮ್ ಬಂಟರ ಭವನದಲ್ಲಿ ಜರಗಿತು. ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ ರೈ ಅದ್ಯಕ್ಷತೆ ವಹಿಸಿದರು.


ವೇದಿಕೆಯಲ್ಲಿ ಬಂಟರ ಸಂಘ ಪುತ್ತೂರು ತಾಲ್ಲೂಕು ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲ್ಲೂಕು ಸಮಿತಿಯ ಸಂಚಾಲಕರಾದ ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ, ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ನಿರ್ದೇಶಕರಾದ ದಯಾನಂದ ರೈ ಮನವಳಿಕೆ ಗುತ್ತು, ಯುವ ಬಂಟರ ವಿಭಾಗದ ಅಧ್ಯಕ್ಷ ಭಾಗ್ಯೆಶ್ ರೈ, ಮಹಿಳಾ ಬಂಟರ ವಿಭಾಗದ ನಿಕಟ ಪೂರ್ವ ಅಧ್ಯಕ್ಷೆ ಸಬಿತ ಭಂಡಾರಿ, ಮಾತೃ ಸಂಘದ ನಿರ್ದೇಶಕಿ ವತ್ಸಲಾ ಶೆಟ್ಟಿ , ಐಸಿರಿ ಭಜನಾ ತಂಡದ ನಾಯಕಿ ನಯನಾ ರೈ ನೆಲ್ಲಿಕಟ್ಟೆ, ಸಾಂಸ್ಕೃತಿಕ ಸಂಚಾಲಕಿ ಹರಿಣಾಕ್ಷಿ ಜೆ ಶೆಟ್ಟಿ, ಗೌರವ ಸಲಹೆಗಾರರಾದ ಜಯಂತಿ ಯಂ ರೈ ಉಪಸ್ಥಿತರಿದ್ದರು.


ಖಾಯಂ ಆಹ್ವಾನಿತರಾದ ದುರ್ಗಾಪ್ರಸಾದ್ ರೈ ಕುಂಬ್ರ, ಮಾತೃ ಸಂಘದ ನಿರ್ದೇಶಕರಾದ ದಯಾನಂದ ರೈ ಕೊರ್ಮoಡ, ಪ್ರಸನ್ನ ಶೆಟ್ಟಿ ಸಾಮೇತಡ್ಕ, ಸುದೇಶ್ ಆರ್ ಶೆಟ್ಟಿ, ನಿತ್ಯಾನಂದ ಶೆಟ್ಟಿ ಮನವಳಿಕೆ, ಜಯಪ್ರಕಾಶ್ ರೈ ನೂಜಿಬೈಲ್, ಬಂಟರ ಸಂಘದ ಕೋಶಾಧಿಕಾರಿ ಸಂತೋಷ್ ಶೆಟ್ಟಿ, ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಬನ್ನೂರು, ಮನ್ಮಥ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.


ಸಂಘದ ಬೈಲಾ ಪ್ರಕಾರ ಆಡಳಿತ ಸಮಿತಿ ಅವಧಿ ಮೂರು ವರ್ಷಕ್ಕೆ ವಿಸ್ತರಿಸಿ ರುವುದರಿಂದ ಈಗಿನ ಮಹಿಳಾ ವಿಭಾಗದ ಪದಾಧಿಕಾರಿಗಳ ಅವಧಿಯನ್ನು ಮುಂದಿನ ಒಂದು ವರ್ಷಕ್ಕೆ ವಿಸ್ತರಿಸುವುದಾಗಿ ಬಂಟರ ಸಂಘ ಪುತ್ತೂರು ತಾಲ್ಲೂಕು ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಸಭೆಯಲ್ಲಿ ಘೋಷಿಸಿದರು.
ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ, ಹರಿಣಾಕ್ಷಿ ಜೆ ಶೆಟ್ಟಿ ಮತ್ತು ವತ್ಸಲಾ ಪಿ. ಶೆಟ್ಟಿ ಶುಭ ಹಾರೈಸಿದರು. ಅಧ್ಯಕ್ಷೆ ಗೀತಾ ಮೋಹನ ರೈ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಯುವ ಬಂಟರ ವಿಭಾಗ ಮತ್ತು ಮಹಿಳಾ ವಿಭಾಗದ ನೇತೃತ್ವದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ನೂತನ ಆಡಳಿತ ಸಮಿತಿಗೆ ಪುತ್ತೂರು ತಾಲೂಕಿನಿಂದ ಆಯ್ಕೆಗೊಂಡ ನಿರ್ದೇಶಕರನ್ನು, ಸಂಚಾಲಕರನ್ನು “ಚಾವಡಿ ಸನ್ಮಾನ ” ನೀಡಿ ಗೌರವಿಸಲಾಯಿತು. ಯುವ ವಿಭಾಗದ ಅಧ್ಯಕ್ಷ ಭಾಗ್ಯೆಶ್ ರೈ ಸನ್ಮಾನಿತರನ್ನು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತಾಡಿದರು. ವಸಂತಿ ರೈ ಪ್ರಾರ್ಥಿಸಿದರು.

ಮಹಿಳಾ ವಿಭಾಗದ ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರವಿಚಂದ್ರ ರೈ,ಭಾಸ್ಕರ್ ರೈ, ರಾಜೀವಿ ಶೆಟ್ಟಿ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದವರು ಸಹಕರಿಸಿದರು. ಮಾಧವಿ ಎಂ. ರೈ ವಂದಿಸಿದರು.

LEAVE A REPLY

Please enter your comment!
Please enter your name here