ಉಪ್ಪಿನಂಗಡಿ: ಶ್ರೀ ಮಾಧವ ಶಿಶು ಮಂದಿರದಲ್ಲಿ ಪ್ರಾರಂಭೋತ್ಸವ ಮತ್ತು ಪೋಷಕರ ಸಭೆ

0

ಮಗುವಿನಲ್ಲಿ ನೋಡಿ ಕಲಿಯುವ, ಮಾಡಿ ತಿಳಿಯುವ, ಪ್ರಶ್ನಿಸುವ ಗುಣಗಳಿದ್ದು, ಅದನ್ನು ಪ್ರೋತ್ಸಾಹ ಮಾಡಿ

ಉಪ್ಪಿನಂಗಡಿ: ಮಗುವಿಗೆ ನೀಡಿದ ಒಂದು ಸಂಸ್ಕಾರದ ಬಿಂದು ಮಗುವಿನ ಮನೆ ಮತ್ತು ಪರಿಸರವನ್ನೇ ಪ್ರಕಾಶಿಸಬಲ್ಲದು. ಈಗಾಗಿ ಶಿಶು ಮಂದಿರಗಳು ಸಂಸ್ಕಾರ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಶಿಕ್ಷಣ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಪ್ರೇರಣಾದಾಯಿಯಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.


ಅವರು ಉಪ್ಪಿನಂಗಡಿಯ ವೇದಶಂಕರನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಪ್ರಾರಂಭೋತ್ಸವ ಮತ್ತು ಪೋಷಕರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಹಿಸಿ ಅದರ ಮುಖೇನ ಜ್ಞಾನ ವೃದ್ದಿಯಾಗುವಂತೆ ನೋಡಿಕೊಳ್ಳಬೇಕಾಗಿದೆ. ಸ್ವಹಿತ ಚಿಂತನೆಯಿಂದ ಪರಹಿತ ಚಿಂತನೆಯತ್ತ ಮನಸ್ಸನ್ನು ಪರಿವರ್ತಿಸುತ್ತಾ, ಎಲ್ಲರೊಂದಿಗೆ ಬೆರೆತು ಬದುಕುವ ಕಲೆಯನ್ನು ಎಳವೆಯಲ್ಲೇ ನೀಡಿದಾಗ ಆ ಮಗು ಹೆತ್ತವರಿಗೆ ಮತ್ತು ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ಸಂಪತ್ತಾಗಿ ರೂಪುಗೊಳ್ಳುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ, ಶ್ರೀ ರಾಮ ಶಾಲಾ ಸಂಚಾಲಕ ಯು.ಜಿ.ರಾಧ , ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಮಾಧವ ಶಿಶು ಮಂದಿರದ ಅಧ್ಯಕ್ಷ ಹರಿರಾಮಚಂದ್ರ, ಉಪಾಧ್ಯಕ್ಷ ಕಂಗ್ವೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಜಾತಕೃಷ್ಣ ಆಚಾರ್ಯ, ಕೋಶಾಧಿಕಾರಿ ಗಾಯತ್ರಿ ವಸಂತ್, ನಿಕಟಪೂರ್ವ ಅಧ್ಯಕ್ಷ ಮನೋಜ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶಿಶು ಮಂದಿರದ ಸ್ಥಳದಾನಿ ಗೋವಿಂದ ಭಟ್, ಆಡಳಿತ ಮಂಡಳಿ ಸದಸ್ಯರಾದ ಜಯಶ್ರೀ ಜನಾರ್ಧನ್, ಎನ್ ರಾಘವೇಂದ್ರ ನಾಯಕ್, ಯು ರಾಜೇಶ್ ಪೈ, ಪ್ರಮುಖರಾದ ಧನಂಜಯ್ ನಟ್ಟಿಬೈಲು ಮೊದಲಾದವರು ಭಾಗವಹಿಸಿದ್ದರು. ವೇದಮೂರ್ತಿ ಶ್ರೀಕಾಂತ್ ಭಟ್ ಪ್ರಾರಂಭೋತ್ಸವದ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಶಿಶು ಮಂದಿರದ ಮಾತಾಜಿಗಳಾದ ಚೈತ್ರಾ ಮಾತಾಜಿ ಹಾಗೂ ಚಂದ್ರಾವತಿ ಮಾತಾಜಿಯವರು ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here