






ಪುತ್ತೂರು: ಕುಂಬ್ರದಲ್ಲಿ ರಿಂಗ್ ಕೆಲಸ ಮಾಡುತ್ತಿರುವ ಕೇರಳ ಮೂಲದ ಪ್ರಮೋದ್ ಎಂಬವರ ಮಾಲಕತ್ವದ ಮಾರುತಿ ಒಮ್ನಿ ಕಾರು (ಕೆ.ಎ 21-ಪಿ-1640) ಕಳವಾಗಿದೆ.


ಪ್ರಮೋದ್ ಅವರ ರಿಂಗ್ ಕೆಲಸ ಮಾಡುವ ಕಾರ್ಮಿಕರು ಕಾವು ಹಾಲಿನ ಸೊಸೈಟಿ ಬಳಿಯ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯವಿದ್ದಾರೆ.ಜೂ.19ರಂದು ಸಂಜೆವೇಳೆ ಕಾರ್ಮಿಕರನ್ನು ಕರೆದೊಯ್ದು ಬಳಿಕ ಕಾರನ್ನು ಅಲ್ಲೇ ನಿಲ್ಲಿಸಲಾಗಿತ್ತು.ರಾತ್ರಿ ಸುಮಾರು 2 ಗಂಟೆವರೆಗೆ ಕಾರು ಶೆಡ್ನಲ್ಲಿತ್ತು.ಬೆಳಿಗ್ಗೆ ನೋಡುವಾಗ ಕಾರು ಕಳವಾಗಿತ್ತು.ಈ ಬಗ್ಗೆ ಸಂಪ್ಯ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.













