ವಾರಿಸುದಾರರ ಮನೆ ಸೇರಿದ ನಾಪತ್ತೆಯಾಗಿದ್ದ ‘ಚಿನ್ನು’: ಮಾತಿನಂತೆ ₹50 ಸಾವಿರ ನೀಡಲಿರುವ ಮಾಲೀಕ

0

ಪುತ್ತೂರು: ಪುತ್ತೂರು: ಇತ್ತೀಚೆಗೆ ಭಾರಿ ಸುದ್ದಿಯಾಗಿದ್ದ ನಾಪತ್ತೆಯಾದ ಸಾಕು ನಾಯಿ ‘ಚಿನ್ನು’ ಕೊನೆಗೂ ಪತ್ತೆಯಾಗಿದ್ದು, ವಾರಿಸುದಾರರ ಮನೆ ಸೇರಿದೆ. ನಾಯಿ ಹುಡುಕಿಕೊಟ್ಟವರಿಗೆ ಘೋಷಿಸಿದ್ದ ₹50 ಸಾವಿರ ನಗದು ಬಹುಮಾನವೂ ಈಗ ಕೈಸೇರಲಿದೆ.

ಮುರ ಪೋಳ್ಯ ಮಠದ ಬಳಿಯ ಶ್ವಾನ ಪ್ರಿಯ ಗಣೇಶ್ ಕೇರ ಅವರ ಪ್ರೀತಿಯ ನಾಯಿ ‘ಚಿನ್ನು’ ಹಲವು ದಿನಗಳಿಂದ ನಾಪತ್ತೆಯಾಗಿತ್ತು. ನಾಯಿಯನ್ನು ಹುಡುಕಿಕೊಟ್ಟವರು ಅಥವಾ ಮಾಹಿತಿ ನೀಡಿದವರಿಗೆ ₹50 ಸಾವಿರ ನಗದು ಬಹುಮಾನ ನೀಡುವುದಾಗಿ ಅವರು ಸಾಮಾಜಿಕ ಜಾಲತಾಣ ಮತ್ತು ಕಟೌಟ್‌ಗಳ ಮೂಲಕ ಘೋಷಿಸಿದ್ದರು.

ಇದೀಗ ನಾಯಿ ಪತ್ತೆಯಾಗಿದ್ದು, “ನಮ್ಮ ‘ಚಿನ್ನು’ ನಮ್ಮ ಮನೆ ಸೇರಿದೆ. ಹುಡುಕಲು ಸಹಕರಿಸಿದ ನಿಮಗೆಲ್ಲರಿಗೂ ಮತ್ತು ಹುಡುಕಿಕೊಟ್ಟ ಪುರಂದರ ಪೋಳ್ಯ ಇವರಿಗೂ ತುಂಬು ಹೃದಯದ ಧನ್ಯವಾದಗಳು. ₹50,000 ಬಹುಮಾನವನ್ನು ಪುರಂದರ ಪೋಳ್ಯ ಇವರಿಗೆ ನೀಡಲಾಗುವುದು” ಎಂದು ಗಣೇಶ್ ಕೇರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here