






ಪುತ್ತೂರು: ವಿಕಲಚೇತನರ ನಿರ್ದೇಶಕರು, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಿಸ್ವಾನ್ ಸಭೆಯು ಜೂ.23ರಂದು ನಡೆಯಿತು.


ಸರಕಾರಿ ಮತ್ತು ವಿಕಲಚೇತನರ ಇಲಾಖೆಯ ವಿಶೇಷ ಶಾಲೆಗಳಲ್ಲಿ ಓದುತ್ತಿರುವ ವಿಕಲಚೇತನ ಮಕ್ಕಳಿಗೆ ಯು.ಡಿ.ಐ.ಡಿ ಕಾರ್ಡ್ ಒದಗಿಸುವುದು, ನಿರಾಮಯ ಯೋಜನೆ ಹಾಗೂ ವಿಕಲಚೇತನರ ಇಲಾಖೆಯ ವಿವಿಧ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.




ಸಭೆಯಲ್ಲಿ ಪುತ್ತೂರು ತಾಲ್ಲೂಕು ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು, ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿ.ಐ.ಇ.ಆರ್.ಟಿ ಶ್ರೀಮತಿ ತನುಜಾ ಎಂ.ಕೆ, ಸರ್ವೋದಯ ವಿಶೇಷ ಶಾಲೆ ಪಂಜಳ, ನರಿಮೊಗ್ರು ಗ್ರಾಮದ ವಿಶೇಷ ಶಾಲೆಯ ವಿಶೇಷ ಶಿಕ್ಷಕಿ ಶ್ರೀಮತಿ ಅನಿತಾ ವಿ.ಎಸ್, ಪುತ್ತೂರು ತಾಲ್ಲೂಕು ಪಂಚಾಯತ್ ವಿಶೇಷ ಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಪುತ್ತೂರು ತಾಲ್ಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಸಹಯೋಗದೊಂದಿಗೆ ಮಾದಕ ವಸ್ತುಗಳ ಸೇವನೆಯ ವಿರುದ್ಧ ‘ನಶ ಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಪುತ್ತೂರು ಬಿಆರ್‌ಸಿಯ ಬಿ.ಐ.ಇ.ಆರ್.ಟಿ ಶ್ರೀಮತಿ ತನುಜಾ ಎಂ.ಕೆ ಅವರು ಪ್ರತಿಜ್ಞಾ ವಿಧಿ ಬೋಧಿಸಿ, ನಶ ಮುಕ್ತ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿದರು.









