







ಆಲಂಕಾರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರು ಇದರ 2026 _27 ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಕುಮಾರಿ ವಂಶಿ ಮತ್ತು ಉಪಮುಖ್ಯಮಂತ್ರಿಯಾಗಿ ದೀಕ್ಷಿತ್ ರವರು ಆಯ್ಕೆಯಾಗಿದ್ದಾರೆ.


ಗೃಹ ಮಂತ್ರಿಯಾಗಿ ಶುಶಾಂತ್ ಮತ್ತು ಪ್ರತೀಕ್. ಪರಿಸರ ಮಂತ್ರಿಯಾಗಿ ಉಜ್ವಲ್ ಮತ್ತು ಸ್ಮಿತಾ. ನೀರಾವರಿ ಮಂತ್ರಿಯಾಗಿ ಆಕಾಶ್ ಮತ್ತು ಜೈನುಲ್ ಕ್ರೀಡಾ ಮಂತ್ರಿಯಾಗಿ ಶರೀನ್ ತ್ಹೊಮಸ್ ಮತ್ತು ದಿಶಾನ್. ಗ್ರಂಥಾಲಯ ಮಂತ್ರಿಯಾಗಿ ಶಾರ್ವಿ ಮತ್ತು ಯಶಿಕ. ಅಕ್ಷರ ದಾಸೋಹ ಮಂತ್ರಿಯಾಗಿ ಪೂರ್ವಿಕ ಮತ್ತು ನಿಖಿಲ ಕೃಷಿ ಮಂತ್ರಿಯಾಗಿ ಕೀರ್ತನ್ ಮತ್ತು ಮನ್ವಿತ್ ಶಿಕ್ಷಣ ಮಂತ್ರಿಯಾಗಿ ಆದ್ಯ ಮತ್ತು ಚರಣ್ ಸಾಂಸ್ಕೃತಿಕ ಮಂತ್ರಿಯಾಗಿ ಚಿನ್ಮಯಿ. ರಿಜಾ ಫಾತಿಮಾರವರು ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಪುನಂತೇಶ್ವರಿ ರವರು ಕಾರ್ಯನಿರ್ವಹಿಸಿದ್ದರು. ನಂತರ ಶಾಲಾಸಂಸತ್ತಿನ ಉದ್ಘಾಟನೆಯನ್ನು ಶಾಲಾ ಮುಖ್ಯ ಗುರುಗಳಾದ ಶಾರದಾ ನೆರವೇರಿಸಿ ಪ್ರಮಾಣವಚನ ಬೋಧಿಸಿದರು, ಶಾಲಾ ಸಂಸತ್ತಿನ ಮುಖ್ಯಸ್ಥರಾದ ಅಬ್ರಹಾಂ ಎಂ ಉಪಸ್ಥಿತರಿದ್ದರು. ರೇಖಾ ಸ್ವಾಗತಿಸಿ, ಭಾಗಿರಥಿ ವಂದಿಸಿದರು. ಸುಮಿತ್ರ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಭಾಗವಹಿಸಿದರು













