







ನೆಲ್ಯಾಡಿ: ಇಲ್ಲಿನ ದುರ್ಗಾಶ್ರೀ ಕಾಂಪ್ಲೆಕ್ಸ್ನ ಮುಂಭಾಗದಲ್ಲಿ ಕಳೆದ 1 ತಿಂಗಳಿಂದ ದ್ವಿಚಕ್ರ ವಾಹನವೊಂದು ಅನಾಥವಾಗಿ ನಿಂತಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಪೇಟೆಯಲ್ಲಿರುವ ಶ್ರೀ ದುರ್ಗಾಶ್ರೀ ಕಾಂಪ್ಲೆಕ್ಸ್ನ ಮುಂಭಾಗದಲ್ಲಿ ಆಕ್ಟೀವಾ ಸ್ಕೂಟರ್ (ಕೆಎ 21, ಇಸಿ 5607)ಕಳೆದ 1 ತಿಂಗಳಿಗಿಂತಲೂ ಹೆಚ್ಚು ಸಮಯಗಳಿಂದ ಅನಾಥವಾಗಿ ನಿಂತಿದೆ. ಈ ವಾಹನವನ್ನು ಯಾರು ಇಲ್ಲಿ ನಿಲ್ಲಿಸಿ ಹೋಗಿದ್ದಾರೆ ಎಂಬ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಒಟ್ಟಾರೆಯಾಗಿ ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯಗಳಿಂದ ಈ ದ್ವಿಚಕ್ರ ವಾಹನ ಇಲ್ಲಿಯೇ ನಿಂತಿದೆ. ಮಾಹಿತಿ ಪ್ರಕಾರ ಕಾಪು ಮೂಲದ ವ್ಯಕ್ತಿಯೊಬ್ಬರು ಈ ದ್ವಿಚಕ್ರ ವಾಹನವನ್ನು ಇಲ್ಲಿ ನಿಲ್ಲಿಸಿ ಹೋಗಿದ್ದು ಅವರ ಮೊಬೈಲ್ ಈಗ ಸ್ವಿಚ್ ಆಫ್ ಆಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಕಳೆದ 1 ತಿಂಗಳಿಗಿಂತಲೂ ಹೆಚ್ಚು ಸಮಯಗಳಿಂದ ಸ್ಕೂಟರ್ ಇಲ್ಲೇ ಇದ್ದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.












