ಪುತ್ತೂರಿನ Growth Up ಪಬ್ಲಿಕ್ ರಿಲೇಶನ್ ಸಂಸ್ಥೆ  ಹಾಗೂ ಭಾರತವಾಣಿ ಮೀಡಿಯಾದ ನೂತನ ವಿಸ್ತೃತ ಕಛೇರಿಯ ಉದ್ಘಾಟನೆ  

0

ಪುತ್ತೂರು: ಪುತ್ತೂರಿನ ಬೈಪಾಸ್ ರಸ್ತೆಯ ತಮನ್ವಿ ಸಿಲ್ಕ್ ಬಳಿಯ ಸಮೃದ್ಧಿ ಕಾಂಪ್ಲೆಕ್ಸ್‌ನ 2ನೇ ಮಹಡಿಯಲ್ಲಿ ಪೋಡ್‌ಕಾಸ್ಟ್ ಸ್ಟುಡಿಯೋ ಒಳಗೊಂಡ ಗ್ರೋಥ್ ಅಪ್ ಪಿಆರ್ ಹಾಗೂ ಭಾರತವಾಣಿ ಮೀಡಿಯಾದ ನೂತನ ಕಚೇರಿ ಉದ್ಘಾಟನೆಗೊಂಡಿತು.

ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಡಾ. ಅನನ್ಯ ಲಕ್ಷ್ಮೀ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಡಾ. ಶ್ರೀಶ ಭಟ್ ಕಚೇರಿಯನ್ನು ಉದ್ಘಾಟಿಸಿದರು. ವೇದವ್ಯಾಸ ರಾಮಕುಂಜ, ವರದರಾಜ್ ಚಂದ್ರಗಿರಿ, ವಿ.ಜಿ. ಭಟ್, ಎಸ್.ಜಿ. ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈಗಾಗಲೇ ಉದ್ಯೋಗಾವಕಾಶ ಕಲ್ಪಿಸಿರುವ ಸಂಸ್ಥೆ ಮುಂದೆಯೂ ಹಲವರಿಗೆ ಉದ್ಯೋಗ ನೀಡುವುದರ ಜೊತೆಗೆ ಸ್ಟಾರ್ಟಪ್‌ಗಳು ಮತ್ತು ಉದ್ಯಮಿಗಳಿಗೆ ಗ್ರೋಥ್ ಅಪ್ ಪಿಆರ್ ಮೂಲಕ ಉತ್ತಮ ಗುಣಮಟ್ಟದ ಸೇವೆ ನೀಡುವುದಾಗಿ ಸಂಸ್ಥಾಪಕ ಪ್ರಣವ್ ಭಟ್ ತಿಳಿಸಿದರು.ಪುತ್ತೂರು ಸೇರಿದಂತೆ ಕರ್ನಾಟಕದ ಹಲವು ಬ್ರಾಂಡ್‌ಗಳಿಗೆ ಗ್ರೋಥ್ ಅಪ್ ಪಿಆರ್ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ ಜಾಲತಾಣ ನಿರ್ವಹಣೆ ಅಥವಾ ಬಿಸಿನೆಸ್ ಪ್ರಮೋಷನ್‌ಗಾಗಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ www.growthuppr.com ವೆಬ್‌ಸೈಟ್ ಭೇಟಿ ನೀಡಬಹುದು.

ಗ್ರೋಥ್ ಅಪ್ ಪಿಆರ್ ಸಂಸ್ಥೆ ಹಾಗೂ ಭಾರತವಾಣಿ ಮೀಡಿಯಾ ಪ್ರಣವ್ ಭಟ್ ನೇತೃತ್ವದಲ್ಲಿ ಕಳೆದ 1 ವರ್ಷದಿಂದ ಹಲವು ಬ್ರಾಂಡ್‌ಗಳು, ಉದ್ಯಮಿಗಳು ಮತ್ತು ಸ್ಟಾರ್ಟಪ್‌ಗಳಿಗೆ ತಮ್ಮದೇ ಶೈಲಿಯಲ್ಲಿ ಸಾಮಾಜಿಕ ಜಾಲತಾಣ ನಿರ್ವಹಣೆ ಸೇವೆ ನೀಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಂಬೋಡಿಯಾ ದೇಶದ ಬ್ರಾಂಡ್‌ಗಳಿಗೂ ಸೇವೆ ನೀಡುವುದರ ಜೊತೆಗೆ ಕರ್ನಾಟಕದ ಹಲವು ಬ್ರಾಂಡ್‌ಗಳಿಗೆ ಮಾರುಕಟ್ಟೆ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತವಾಣಿ ಮೀಡಿಯಾ ಯೂಟ್ಯೂಬ್ ಚಾನೆಲ್‌ನ ಪೋಡ್‌ಕಾಸ್ಟ್ ಮೂಲಕ ಜನಮನ್ನಣೆ ಗಳಿಸಿದೆ.

LEAVE A REPLY

Please enter your comment!
Please enter your name here