ನೆಲ್ಯಾಡಿ: ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸನ್ಮಾನ

0

ನೆಲ್ಯಾಡಿ: ಕಳೆದ ಎರಡು ವರ್ಷಗಳಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನೆಲ್ಯಾಡಿ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಗ್ರಾಹಕರ ವಿಶ್ವಾಸಗಳಿಸಿದ್ದ ಪಂಕಜ್ ಕುಮಾರ್ ಅವರು ಇದೀಗ ಬೇರೆಡೆಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ನೆಲ್ಯಾಡಿಯ ಸಾರ್ವಜನಿಕರು, ಉದ್ಯಮಿಗಳು ಹಾಗೂ ಗ್ರಾಹಕರ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ನೆಲ್ಯಾಡಿ ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ಶಾಲೆಯ ಅಧ್ಯಕ್ಷರಾದ ನಾಝೀಂ ಸಾಹೇಬ್ ಅವರು ಪಂಕಜ್‌ಕುಮಾರ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಗಣೇಶ್ ಸ್ಟೋರ್ ಮಾಲಕರಾದ ದಿನೇಶ್ ಎಂ.ಟಿ. ಅವರು ಹಣ್ಣು ಹಂಪಲು ನೀಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನೆಲ್ಯಾಡಿ ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ಶಾಲೆಯ ಅಧ್ಯಕ್ಷ ನಾಝೀಂ ಸಾಹೇಬ್‌ರವರು ಪಂಕಜ್‌ಕುಮಾರ್ ಅವರು ತಮ್ಮ ಸೇವಾ ಅವಧಿಯಲ್ಲಿ ಗ್ರಾಹಕ ಸ್ನೇಹಿ ಸೇವೆ ನೀಡಿ ಬ್ಯಾಂಕಿನ ಪ್ರಗತಿಗೆ ಶ್ರಮಿಸಿರುವುದನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ರಾಜಾ, ಉಸ್ಮಾನ್ ಬೈಲು, ಜಿ.ಕೆ. ಶರೀಫ್, ಮಸೂದ್ ಸಿಟಿ, ಮಂಜುನಾಥ್, ಲಕ್ಷ್ಮೀ ಮೊಬೈಲ್ ಮಾಲೀಕರು, ಕೃಷಿಕರಾದ ಬಾಲಕೃಷ್ಣ ತೋಟ, ರವಿ ಸುರಕ್ಷಾ, ರಝಾಕ್ ಪೈಂಟರ್, ಶಶಿ ಟೈಲರ್ ಶಶಿ, ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕರಾದ ಸನತ್ ಕುಮಾರ್, ಸಿಬ್ಬಂದಿಗಳಾದ ಮೋಹನ್ ಕುಮಾರ್, ಬಾಲಕೃಷ್ಣ, ತೋಮಸ್, ರಾಜೀವ್ ಮತ್ತಿತರರು ಉಪಸ್ಥಿತರಿದ್ದರು. ಪಂಕಜ್ ಕುಮಾರ್ ಅವರು ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿದ ಮಾತನಾಡಿದರು. ರಫೀಕ್ ಬೈಲು ಸ್ವಾಗತಿಸಿದರು.

LEAVE A REPLY

Please enter your comment!
Please enter your name here