







ಪುತ್ತೂರು: ಪಾಸ್‌ಪೋರ್ಟ್ ಸೇವೆಗಳ ಶುಲ್ಕವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದ್ದು, ಜುಲೈ 1, 2026ರಿಂದ ಹೊಸ ದರ ಜಾರಿಗೆ ಬರಲಿದೆ. ಇದರಿಂದ ಹೊಸ ಪಾಸ್‌ಪೋರ್ಟ್ ಪಡೆಯುವುದು ಮತ್ತು ನವೀಕರಣ ಶುಲ್ಕ ಏರಿಕೆಯಾಗಲಿದೆ.


ಪರಿಷ್ಕೃತ ಶುಲ್ಕ ವಿವರ:
ಸಾಮಾನ್ಯ 36 ಪುಟಗಳ ಪಾಸ್‌ಪೋರ್ಟ್: 1500 ರೂ. ನಿಂದ 2000 ರೂ.ಗೆ ಏರಿಕೆ
60 ಪುಟಗಳ ಜಂಬೋ ಪಾಸ್‌ಪೋರ್ಟ್: 2000 ರೂ. ನಿಂದ 2500 ರೂ.ಗೆ ಏರಿಕೆ
ತತ್ಕಾಲ್ ಸೇವೆ: ಹೆಚ್ಚುವರಿ 2000 ರೂ. ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಮೂಲ ಶುಲ್ಕ ಏರಿಕೆಯಿಂದ ಒಟ್ಟು ವೆಚ್ಚ 3500 ರೂ. ನಿಂದ 4000 ರೂ.ಗೆ ಮತ್ತು 4000 ರೂ. ನಿಂದ 4500 ರೂ.ಗೆ ಏರಲಿದೆ. ಅಪ್ರಾಪ್ತರ ಪಾಸ್‌ಪೋರ್ಟ್ (15 ವರ್ಷದೊಳಗಿನವರು): 1000 ರೂ. ನಿಂದ 1500 ರೂ.ಗೆ ಏರಿಕೆ. ಪೊಲೀಸ್ ಪರಿಶೀಲನಾ ಶುಲ್ಕವನ್ನು 500 ರೂ.ಗೆ ನಿಗದಿಪಡಿಸಲಾಗಿದೆ. ಈ ಮೊದಲು ಇದು ಪಾಸ್‌ಪೋರ್ಟ್ ಶುಲ್ಕದಲ್ಲೇ ಒಳಗೊಂಡಿತ್ತು, ಈಗ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.



ಶುಲ್ಕ ಏರಿಕೆಗೆ ಕಾರಣ:
ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ನಿರ್ವಹಣೆ, ತಂತ್ರಜ್ಞಾನ ಉನ್ನತೀಕರಣ, ಇ-ಪಾಸ್‌ಪೋರ್ಟ್ ಚಿಪ್ ಅಳವಡಿಕೆ ಮತ್ತು ಭದ್ರತಾ ವೈಶಿಷ್ಟ್ಯಗಳ ಹೆಚ್ಚಳದಿಂದ ವೆಚ್ಚ ಏರಿಕೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಕಳೆದ ಬಾರಿ 2017ರಲ್ಲಿ ಪಾಸ್‌ಪೋರ್ಟ್ ಶುಲ್ಕ ಪರಿಷ್ಕರಿಸಲಾಗಿತ್ತು. 9 ವರ್ಷಗಳ ಬಳಿಕ ಇದೀಗ ದರ ಏರಿಕೆಯಾಗಿದೆ.










