ನಾಡಪ್ರಭು ಕೆಂಪೇಗೌಡ ಜಯಂತಿ: ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಆಶ್ರಿತ್ ಕೃಷ್ಣ ದಾಳಿಂಬಗೆ ಪ್ರಥಮ

0

ಪುತ್ತೂರು: ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ನಡೆದ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಸುದಾನ ವಸತಿಯುತ ಶಾಲೆ ಪುತ್ತೂರು ಇದರ 9ನೇ ತರಗತಿ ವಿದ್ಯಾರ್ಥಿ ಆಶ್ರಿತ್ ಕೃಷ್ಣ ದಾಳಿಂಬ ಪ್ರಥಮ ಬಹುಮಾನ ಪಡೆದಿದ್ದಾನೆ.ಆಶ್ರಿತ್ ಕೃಷ್ಣ ದಾಳಿಂಬ ಶಿವಳ್ಳಿ ಸಂಪದ ಬೊಳುವಾರು ವಲಯ ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ ಹಾಗೂ ಸುದಾನ ಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಪೂಜಾ ಹರಿಪ್ರಸಾದ್ ದಂಪತಿಗಳ ಪುತ್ರ.ಕೆಂಪೇಗೌಡರ ದೂರದೃಷ್ಟಿ, ಬೆಂಗಳೂರು ನಿರ್ಮಾಣದ ಕನಸು ಹಾಗೂ ಆಡಳಿತಾತ್ಮಕ ಕೊಡುಗೆಗಳ ಕುರಿತು ಆಶ್ರಿತ್ ಮಾಡಿದ ಭಾಷಣ ತೀರ್ಪುಗಾರರ ಮೆಚ್ಚುಗೆ ಗಳಿಸಿತು. ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಪೋಷಕರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here