ಸವಣೂರಿನಲ್ಲಿ ಮಾಂಡೋವಿ ಮೋಟಾರ‍್ಸ್‌ನ ಸ್ಯಾಟಲೈಟ್ ಶೋ.ರೂಂ ಶುಭಾರಂಭ

0

ಪುತ್ತೂರು; ಕಾರು ಮಾರಾಟದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಮಾರುತಿ ಸುಝುಕಿ ಕಂಪನಿಯ ಅಧಿಕೃತ ವಿತರಕರಾಗಿರುವ ಮಾಂಡೋವಿ ಮೋಟಾರ‍್ಸ್ ಅವರ ಸ್ಯಾಟಲೈಟ್ ಶಾಖೆಯು ಜು.27ರಂದು ಸವಣೂರಿನ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತ್ತು.


ಉದ್ಘಾಟಿಸಿದ ಸವಣೂರು ಗ್ರಾ.ಪಂ ಮಾಜಿ ಅಧ್ಯಕ್ಷರು, ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾಗಿರುವ ಗಿರಿಶಂಕರ್ ಸುಲಾಯ ಮಾತನಾಡಿ, ಬೆಳೆಯುತ್ತಿರುವ ಸವಣೂರಿನಲ್ಲಿ ಕಾರುಗಳ ಸೇವೆಯ ಕೊರತೆಯಿತ್ತು. ಅದನ್ನು ಮಾಂಡೋವಿ ಮೋಟಾರ‍್ಸ್ ಪೂರೈಸಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಕಾರುಗಳ ಸೇವೆ ಪ್ರಾರಂಭಿಸುವ ಮುಖಾಂತರ ಮಾಂಡೋವಿ ಮೋಟಾರ‍್ಸ್ ಸವಣೂರಿನ ಬೆಳವಣಿಗೆ ದೊಡ್ಡ ಕೊಡುಗೆ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.


ಸವಣೂರು ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಹಾಜಿ ಕಣೆಮಜಲು ಮಾತನಾಡಿ, ಮಾಂಡೋವಿ ಮೋಟಾರ‍್ಸ್‌ನವರ ಶೋ ರೂಂ ಸವಣೂರಿನಂತ ಗ್ರಾಮೀಣ ಪ್ರದೇಶಕ್ಕೆ ಬಂದಿರುವುದು ಬಹಳಷ್ಟು ಸಂತೋಷ ತಂದಿದೆ. ಸಂಸ್ಥೆಗೆ ಈ ಭಾಗದ ಜನರ ಸಹಕಾರ ದೊರೆತು ಸಂಸ್ಥೆಯು ಇನ್ನಷ್ಟು ಬೆಳೆಯಲಿ ಗ್ರಾಹಕರಿಗೆ ಉತ್ತಮ ಸೇವೆ ದೊರೆಯಲಿ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಒಂದು ಸಂಸ್ಥೆಯು ತನ್ನ ಸೇವೆಗಳನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸಿದಾಗ ಅದು ಬೆಳೆಯುವ ಸಾಧ್ಯವಿದ್ದು ಅದನ್ನು ಮಾಂಡೋವಿ ಮಾಡಿದೆ. ಸವಣೂರಿನ ಕೇಂದ್ರ ಪ್ರದೇಶದಲ್ಲಿ ತನ್ನ ಸೇವೆ ಪ್ರಾರಂಭಿಸುವ ಮೂಲಕ ಬೆಳೆಯುತ್ತಿರುವ ಸವಣೂರಿನ ಮುಕುಟಕ್ಕೆ ಮತ್ತೊಂದು ಗರಿಯಾಗಿದೆ ಎಂದರು.
ಸವಣೂರು ಗ್ರಾ.ಪಂ ಮಾಜಿ ಸದಸ್ಯ ರಫೀಕ್ ಎಂ.ಎ., ಸವಣೂರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ಊರು. ಮಾಂಡೋವಿ ಮೋಟಾರ‍್ಸ್ ಇದೀಗ ಇಲ್ಲಿನ ಬಹುದೊದ್ದ ಆವಶ್ಯಕತೆ ಪೂರೈಸಿದ್ದು ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳಲಿ ಎಂದರು.


ಸವಣೂರು ಶಾಖೆಯ ಪ್ರಥಮ ಗ್ರಾಹಕರಾದ ಮಹಮ್ಮದ್ ಖಲಂದರ್ ಬಿ.ಎಚ್ ಅವರಿಗೆ ಎರ್ಟಿಗಾ ಕಾರು ಹಾಗೂ ಹಿಲಾರಿ ಡಿ ಸೋಜ ಅವರಿಗೆ ವಿಕ್ಟೋರಿಯಾ ಕಾರುಗಳ ಕೀ ಹಸ್ತಾಂತರಿಸಲಾಯಿತು. ಎಸ್ ಪ್ರೆಸ್ಸೋ ಕಾರು ಬುಕ್ಕಿಂಗ್ ಮಾಡಿದ ಜಯಂತ ಬೈತ್ತಡ್ಕ ಅವರನ್ನು ಗೌರವಿಸಲಾಯಿತು.


ಸೀತಾರಾಮ ರೈಯವರಿಗೆ ಗೌರವಾರ್ಪಣೆ:
ಕಾರ್ಯಕ್ರಮಕ್ಕೆ ಆಗಮಿಸಿದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ ಸೀತಾರಾಮ ರೈಯವರನ್ನು ಸನ್ಮಾನಿಸಿ, ಗೌರವವಿಸಲಾಯಿತು.
ಕೃಷಿಕ ಸಮಾಜದ ಜಿಲ್ಲಾ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಅಬ್ದುಲ್ ರಝಾಕ್, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಭಟ, ಕೆ.ಎಸ್ ಬಲ್ಯಾಯ, ಸವಣೂರು ಗ್ರಾ.ಪಂ ಮಾಜಿ ಸದಸ್ಯ ಅಬ್ದುಲ್ ರಝಾಕ್, ಪಾಲಾರ್ ಕನ್‌ಸ್ಟ್ರಕ್ಷನ್‌ನ ವಿಜಯ ಸುಬ್ರಹ್ಮಣ್ಯ, ಝಕಾರಿಯಾ, ಶ್ರೀಧರ್ ಮಾದೋಡಿ, ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ವಿನೋದ್ ಲಸ್ರಾದೋ, ಅಬ್ದುಲ್ ಸಹಲ್, ಬ್ಯಾಂಕ್ ಆಫ್ ಬರೋಡ ಕಾಣಿಯೂರು ಶಾಖಾ ವ್ಯವಸ್ಥಾಪಕ ಸೂರ್ಯನಾರಾಯಣ ಸಹಿತ ಹಲವು ಮಂದಿ ಸಾರ್ವಜನಿಕರು ಹಾಗೂ ಗ್ರಾಹಕರು ಆಗಮಿಸಿ ಶುಭಹಾರೈಸಿದರು.


ಡೆಪ್ಯುಟಿ ಸೇಲ್ಸ್ ರೂರಲ್ ಮ್ಯಾನೇಜರ್ ಸುಜಿತ್ ಕುಮಾರ್ ಸ್ವಾಗತಿಸಿದರು. ಡಿಜಿಎಂ ಅಕ್ಷಯ್ ಜೈನ್ ವಂದಿಸಿದರು. ನ್ಯಾಯವಾದಿ ಕೌಶಿಕ್ ಆಲಂಕಾರು ಕಾರ್ಯಕ್ರಮ ನಿರೂಪಿಸಿದರು. ಸೇಲ್ಸ್ ವಿಭಾಗದ ಎಜಿಎಂ ಕಿಶನ್ ಕೆ ಶೆಟ್ಟಿ, ರೂರಲ್ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಸುರೇಶ್, ಸುಳ್ಯದ ಸರ್ವೀಸ್ ವಿಭಾಗದ ಡಿಜಿಎಂ ಚಂದ್ರಶೇಖರ ಸನಿಲ್, ಹೆಚ್.ಆರ್ ಮ್ಯಾನೇಜರ್ ಶಿವಪ್ರಸಾದ್, ಉಪ್ಪಿನಂಗಡಿಯ ವರ್ಕರ‍್ಸ್ ಮ್ಯಾನೇಜರ್ ಸುದೇಶ್ ಜೈನ್, ಡಿಜಿಟಲ್ ಡೆಸ್ಕ್ ಮ್ಯಾನೇಜರ್ ಡೆಂಝಿಲ್ ಪಿಂಟೋ, ಆಕೌಂಟ್ ಮ್ಯಾನೇಜರ್ ಹರೀಶ್, ಕಸ್ಟಮರ್ ಕ್ಯಾರ್ ಮ್ಯಾನೇಜರ್ ಗಿರೀಶ್, ಟೀಮ್ ಲೀಡರ್ ಗುರುರಾಜ್, ಸಂಧ್ಯಾ, ಮಿಲನ್ ಶೆಟ್ಟಿ, ಚೇತನ್, ದೀಪಕ್ ಪಿಲ್ಲೈ, ಚೇತನ್ ಯು.ಬಿ. ಅತಿಥಿಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು.

ಒಂದೇ ವರ್ಷದಲ್ಲಿ ಸವಣೂರಿನಲ್ಲಿ ವರ್ಕ್‌ಶಾಫ್
ಮಾಂಡೋವಿ ಮೋಟಾರ‍್ಸ್ ಕರ್ನಾಟಕದ ಪ್ರಥಮ ಡೀಲರ್ 1984ರಲ್ಲಿ ಪ್ರಾರಂಭಗೊಂಡಿದೆ. ಉತ್ತಮ ಸೇವಾ ಸೌಲಭ್ಯಗಳು ಸಂಸ್ಥೆಯಲ್ಲಿದ್ದು ಮಾರುತಿ ಕಾರುಗಳ ಖರೀದಿಗೆ ಮಾಂಡೋವಿ ಪ್ರಥಮ ಆಯ್ಕೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಮಾಂಡೋವಿ ಮೋಟಾರ‍್ಸ್‌ನ 40 ಶೋರೂಂಗಳು, 43 ವರ್ಕ್‌ಶಾಫ್‌ಗಳಿವೆ. ದ.ಕ ಜಿಲ್ಲೆಯಲ್ಲಿ 12 ವರ್ಕ್‌ಶಾಫ್, 14 ಶೋರೂಂಗಳಿವೆ. ರಾಜ್ಯದಲ್ಲಿ 38,೦೦೦ಕಾರುಗಳನ್ನು ಸರ್ವೀಸ್ ಮಾಡಲಾಗುತ್ತಿದೆ. ಪಟ್ಟಣದಲ್ಲಿದ್ದ ಶೋರೂ ಇಂದು ಪ್ರತಿ ಗ್ರಾಮಕ್ಕೂ ಬರುತ್ತಿದೆ. ಸವಣೂರಿನಲ್ಲಿ ಸ್ಯಾಟಲೈಟ್ ಶೋರೂಂ ಪ್ರಾರಂಭಿಸಿದ್ದು ಗ್ರಾಹಕರ ಉತ್ತಮ ಸಹಕಾರ ದೊರೆತರೆ ಒಂದೇ ವರ್ಷದಲ್ಲಿ ವರ್ಕ್‌ಶಾಫ್ ಪ್ರಾರಂಭಿಸಲಾಗುವುದು.
-ಪಾರ್ಶ್ವನಾಥ ನೇರೆಂಕಿ, ಉಪಾಧ್ಯಕ್ಷರು ಮಾಂಡೋವಿ ಮೋಟಾರ‍್ಸ್

ಸವಣೂರಿನ ಮನೆ ಮನೆಯಲ್ಲಿ ಮಾರುತಿ
ಮಾಂಡೋವಿ ಮೋಟಾರ‍್ಸ್ ಸಂಸ್ಥೆಯು 43ನೇ ವರ್ಷ ಪಾದಾರ್ಪಣೆಯ ಸಂಭ್ರಮದಲ್ಲಿದೆ. ಸಂಸ್ಥೆಯ ಸೇವೆಯು ಗ್ರಾಹಕರಿಗೆ ಇನ್ನು ಹತ್ತಿರುವಾಗುವ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಿಗೆ ಸೇವೆ ವಿಸ್ತರಿಸಲಾಗುತ್ತಿದೆ. ಬೆಳೆಯುತ್ತಿರುವ ಸವಣೂರಿಗೆ ಸಂಸ್ಥೆಯ ಶಾಖೆ ಪ್ರಾರಂಭಗೊಂಡಿದೆ. ಗ್ರಾಹಕರಿಗೆ ಕಾರುಗಳ ಸೇಲ್ಸ್ ಜೊತೆಗೆ ಸರ್ವೀಸ್ ನೀಡಲಾಗುವುದು. ಅನುಭವೀ ಸಿಬ್ಬಂದಿಗಳ ತಂಡ ಸವಣೂರು ಶಾಖೆಯಲ್ಲಿದ್ದಾರೆ. ಪ್ರತಿ ಮನೆಗೆ ಭೇಟಿನ ನೀಡಿ ಸೇವೆ ನೀಡಲಿದ್ದಾರೆ.. ಮನೆ ಮನೆಯಲ್ಲಿ ಮಾರುತಿ ಎಂಬ ಮಾರುತಿ ಕಂಪನಿಯ ಕನಸಿನಂತ ಸವಣೂರಿನ ಮನೆ ಮನೆಯಲ್ಲಿ ಮಾರುತಿ ಕಾರು ಬರುವಂತಾಗಲಿ ಎಂದರು.
-ಶಶಿಧರ್ ಕಾರಂತ, ಜಿ.ಎಂ ಸೇಲ್ಸ್, ಮಾರ್ಕೆಟಿಂಗ್ ಮಾಂಡೋವಿ ಮೋಟಾರ‍್ಸ್

ಶುಭಾರಂಭದ ಆಫರ್
ಮಾಂಡೋವಿ ಮೋಟಾರ‍್ಸ್‌ನ ಸವಣೂರು ಶಾಖೆಯ ಶುಭಾರಂಭದ ಅಂಗವಾಗಿ ವಿಕ್ಟೋರಿಸ್ ಕಾರುಗಳ ಖರೀದಿಗೆ ರೂ.1 ಲಕ್ಷದ ವರೇಗಿನ ರಿಯಾಯಿತಿ ದೊರೆಯಲಿದೆ. ಜೊತೆಗೆ ಇತರ ಎಲ್ಲಾ ಮಾಡೆಲ್‌ನ ಕಾರುಗಳ ಖರೀದಿಗೆ ಆಕರ್ಷಕ ರಿಯಾಯಿತಿ ದೊರೆಯಲಿದ್ದು ಈ ತಿಂಗಲ ಕೊನೆ ತನಕ ಈ ಸೌಲಭ್ಯ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಚೇತನ್ ಯು.ಬಿ. 9845506596 ನಂಬರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here