ಹಾಸನ ಜಿಲ್ಲಾ ಚೊಚ್ಚಲ ಚುಟುಕು ಸಾಹಿತ್ಯ ಸಮ್ಮೇಳನ : ಬಹುಭಾಷಾ ಕವಿಗೋಷ್ಠಿಯಲ್ಲಿ ಮಲ್ಲಿಕಾ ಜೆ. ರೈ ಭಾಗಿ

0

ಪುತ್ತೂರು: ಹಾಸನದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ  ಜೂ.28ರಂದು ‘ಹಾಸನ ಜಿಲ್ಲಾ ಚೊಚ್ಚಲ ಚುಟುಕು ಸಾಹಿತ್ಯ ಸಮ್ಮೇಳನ-2026’ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿರುವ ‘ಬಹುಭಾಷಾ ಚುಟುಕು ಕವಿಗೋಷ್ಠಿ’ಗೆ ಪುತ್ತೂರಿನ ಲೇಖಕಿ, ಅಂಕಣಕಾರರು ಹಾಗೂ ಕವಯಿತ್ರಿ ಮಲ್ಲಿಕಾ ಜೆ. ರೈ ಅವರು ಆಯ್ಕೆಯಾಗಿದ್ದಾರೆ.

​ಈ ಕುರಿತು ಸಮ್ಮೇಳನದ ಆಯೋಜಕರು ಪ್ರಕಟಣೆ ಹೊರಡಿಸಿದ್ದು, ಕವಯಿತ್ರಿ ಮಲ್ಲಿಕಾ ಜೆ. ರೈ ಅವರು ಕವಿಗೋಷ್ಠಿಯಲ್ಲಿ ಭಾಗವಹಿಸಿ ತುಳು ಹಾಗೂ ಕನ್ನಡ ಭಾಷೆಗಳಲ್ಲಿ ತಮ್ಮ ಚುಟುಕುಗಳನ್ನು ವಾಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here