ಪುಣಚ ಸಂಕೇಶ ಅಕ್ಕಮ್ಮರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಪುಣಚ: ಇತ್ತೀಚೆಗೆ ನಿಧನರಾದ ಪುಣಚ ಗ್ರಾಮದ ಸಂಕೇಶ ಮನೆ ಅಕ್ಕಮ್ಮರವರ ವೈಕುಂಠ ಸಮರಾಧನೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಜೂ.27ರಂದು ವಿಟ್ಲ ಚಂದಳಿಕೆ ಭಾರತ ಅಡಿಟೋರಿಯಂನಲ್ಲಿ ನಡೆಯಿತು.

ಪ್ರಗತಿಪರ ಕೃಷಿಕ ಐತ್ತಪ್ಪ ಗೌಡ ಒಳಕಟ್ಟೆ ಮಾತನಾಡಿ ಮೃತರ ಜೀವನ, ಆದರ್ಶ ಬದುಕು, ವ್ಯಕ್ತಿತ್ವದ ಬಗ್ಗೆ ನುಡಿ ನಮನ ಸಲ್ಲಿಸಿದರು.‌ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರಾದ ತಿಮ್ಮಪ್ಪ ಗೌಡ ಆಲಂಗಾರು, ಪದ್ಮಯ್ಯ ಗೌಡ ಕಾಣಿಯೂರು, ವೀರಪ್ಪ ಗೌಡ ಸಂಕೇಶ, ವಾಸಪ್ಪ ಗೌಡ ಗಡಾಜೆ, ನೇಮಣ್ಣ ಗೌಡ ಪಟ್ಟೆ, ಆಲಂಗಾರು, ಕರುಣಾಕರ ಗೌಡ ಸಂಕೇಶ ಸೇರಿದಂತೆ ಊರ ಗಣ್ಯರು, ಜನಪ್ರತಿನಿಧಿಗಳು, ಕುಟುಂಬಸ್ಥರು‌ ಹಾಗೂ ಹಲವಾರು ಮಿತ್ರರು, ಹಿತೈಷಿಗಳು ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಅಕ್ಕಮ್ಮರವರ ಸಹೋದರಿಯರಾದ ಗಿರಿಜಾ, ಜಾನಕಿ, ಲಲಿತ, ಪುತ್ರರಾದ ರಾಧಾಕೃಷ್ಣ ಗೌಡ, ಶಿವರಾಮ ಗೌಡ, ನವೀನ ಗೌಡ, ಸೊಸೆಯಂದಿರಾದ ವಸಂತಿ, ಯಶೋಧ ಪುತ್ರಿಯರಾದ ಜಯಶೀಲಾ, ಶೋಭಾ ಅಳಿಯಂದಿರಾದ ದೇವಪ್ಪ ಗೌಡ, ಗಂಗಾಧರ ಗೌಡ ಹಾಗೂ ಮೊಮ್ಮಕ್ಕಳಾದ ಸಾನಿಧ್ಯ, ಸಮರ್ಥ್, ಕಾರುಣ್ಯ, ಲಿಖಿತ್, ಸ್ಪಂದನಾ, ಸಿಂಚನ, ಲಾವಣ್ಯ, ಹವ್ಯಾಸ್ ಉಪಸ್ಥಿತರಿದ್ದರು.


ಮೌನ‌ ಪ್ರಾರ್ಥನೆ, ಪುಷ್ಪಾರ್ಚನೆ:-
ಅಗಲಿದ ಪುಣಚ ಸಂಕೇಶ ಮನೆ ಅಕ್ಕಮ್ಮ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here