ಒಡ್ಯ ಶಾಲಾ ಮಕ್ಕಳಿಗೆ ಪುಸ್ತಕ, ಕಲಿಕಾ ಸಾಮಾಗ್ರಿ ವಿತರಣೆ : ವಿವೇಕ ಹೈಸ್ಕೂಲ್ ಬಳಗ 2002ರ ಸೇವಾ ಕಾರ್ಯ

0

ನಿಡ್ಪಳ್ಳಿ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಇಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿಯ ಪುಟಾಣಿಗಳಿಗೆ ವಿವೇಕ ಹೈಸ್ಕೂಲ್ ಬಳಗ – 2002, ಕೋಟ, ಉಡುಪಿ ವತಿಯಿಂದ ಜೂ.27ರಂದು ಬರೆಯುವ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರೂಪ್‌ನ ಮುಖ್ಯಸ್ಥ ಪ್ರವೀಣ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಮುಖ್ಯಗುರು ಜನಾರ್ದನ ಅಲ್ಚಾರು ಪ್ರಾಸ್ತಾವಿಕವಾಗಿ ಮಾತನಾಡಿ, “ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಇಂತಹ ಕಾರ್ಯ ಶ್ಲಾಘನೀಯ. ಹಳೆ ವಿದ್ಯಾರ್ಥಿಗಳ ಈ ಕಾಳಜಿ ಇತರರಿಗೆ ಮಾದರಿ” ಎಂದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರೇಮ ಪಡ್ಯಂಬೆಟ್ಟು, ಮುಖ್ಯ ಅತಿಥಿ ಭರತ್ ಪಡುಬಿದ್ರಿ ಉಪಸ್ಥಿತರಿದ್ದರು. ಶಿಕ್ಷಕಿ ಸ್ವರ್ಣಲತಾ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕಿ ದಿವ್ಶಾ ಪಡುಬಿದ್ರಿ ವಂದಿಸಿದರು. ಶಾಲೆಯ ಎಲ್ಲಾ ಶಿಕ್ಷಕ ವೃಂದ ಕಾರ್ಯಕ್ರಮಕ್ಕೆ ಸಹಕರಿಸಿತು.

LEAVE A REPLY

Please enter your comment!
Please enter your name here