ನೀರಾಜೆ ಮದ್ರಸದಲ್ಲಿ ಸಮಸ್ತ 101ನೇ ಸ್ಥಾಪನಾ ದಿನಾಚರಣೆ

0

ರಾಮಕುಂಜ: ನೀರಾಜೆ ನೂರುಲ್ ಹುದಾ ಮಸ್ಜಿದ್ ಮತ್ತು ಮದ್ರಸದ ವತಿಯಿಂದ ಸಮಸ್ತ 101ನೇ ಸ್ಥಾಪಕ ದಿನವನ್ನು ಆಚರಿಸಲಾಯಿತು.


ಮುಹಮ್ಮದ್ ಮುಸ್ಲಿಯಾರ್ ಕೊಯಿಲ ದುಆ ನಡೆಸಿದರು. ಎನ್‌ಎಚ್‌ಎಂ ನೀರಾಜೆ ಆಡಳಿತ ಸಮಿತಿ ಅಧ್ಯಕ್ಷ ಎನ್.ಸಿದ್ದೀಕ್ ಧ್ವಜೋಹರಣ ನೆರವೇರಿಸಿದರು. ನಾಸಿರ್ ಅಸ್ಸಾಫಿ ಉಸ್ತಾದ್ ಆಶಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ಕೋಶಾಧಿಕಾರಿ ನಝೀರ್, ಸದಸ್ಯರಾದ ಸಿದ್ದೀಕ್, ರಝಕ್ ದಾರಿಮಿ, ಎಸ್‌ಕೆಎಸ್‌ಎಸ್‌ಎಫ್ ಪದಾಧಿಕಾರಿಗಳು, ಯೆಂಗ್‌ಮೆನ್ಸ್ ಪದಾಧಿಕಾರಿಗಳು, ಎಸ್‌ಕೆಎಸ್‌ಬಿವಿ ಅಧ್ಯಕ್ಷ ಶಿಹಾಬುದ್ದೀನ್ ಹಾಗೂ ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಡಳಿತ ಸಮೀತಿಯ ಕಾರ್ಯದರ್ಶಿ ಪುತ್ತುಕುಂಞಿ ಸ್ವಾಗತಿಸಿದರು. ಮುರ್ಶಿದ್ ನೀರಾಜೆ ವಂದಿಸಿದರು.

LEAVE A REPLY

Please enter your comment!
Please enter your name here