ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆ 7ನೇ ವರ್ಷಕ್ಕೆ ಪಾದಾರ್ಪಣೆ, ಶಾಖಾ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ

0

ಕಡಬ: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಪ್ರಾಯೋಜಿತ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆ ಜೂ.26ರಂದು ಯಶಸ್ವಿ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಆ ಪ್ರಯುಕ್ತ ಜೂ.27ರಂದು ಬೆಳಗ್ಗೆ ಆಲಂಕಾರು ಶ್ರೀ ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಶಾಖಾ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು.

ಸುಬ್ರಹ್ಮಣ್ಯ ಬಳ್ಳಕ್ಕುರಾಯ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಕಳೆದ 24 ವರ್ಷಗಳಲ್ಲಿ ಸಾಕಷ್ಟು ಬೆಳವಣಿಗೆಗಳನ್ನು ಸಾಧಿಸಿದ್ದು ಎಲ್ಲಾ ಸಮುದಾಯಕ್ಕೂ ಸ್ಪಂದಿಸುವ ಸಂಘವಾಗಿ ಗುರುತಿಸಿಕೊಂಡಿದೆ. ಸಂಘದಲ್ಲಿ ಸುಮಾರು 8200 ಸದಸ್ಯರಿದ್ದು 5 ಕೋಟಿಗೂ ಮಿಕ್ಕಿ ಪಾಲು ಬಂಡವಾಳವಿದೆ. 2025-26ನೇ ಆರ್ಥಿಕ ವರ್ಷದಲ್ಲಿ 881 ಕೋಟಿ ರೂ.ವ್ಯವಹಾರ ಮಾಡಿ ಶೇ 99.10 ಸಾಲ ವಸೂಲಾತಿ ಮಾಡಲಾಗಿದೆ. ಆಲಂಕಾರು ಶಾಖೆಯು ಕಳೆದ ಆರ್ಥಿಕ ಸಾಲಿನಲ್ಲಿ 69.63 ಕೋಟಿ ರೂ. ವ್ಯವಹಾರ ಮಾಡಿದೆ. 13.93 ಕೋಟಿ ರೂ.ಠೇವಣಿ ಸಂಗ್ರಹಿಸಿ, 11.19 ಕೋಟಿ ರೂ.ಸಾಲ ವಿತರಣೆ ಮಾಡಿದೆ. ಶೇ.100 ಸಾಲ ವಸೂಲಾತಿ ಸಾಧನೆ ಮಾಡಿದೆ. ಆಡಳಿತ ಮಂಡಳಿ ಸದಸ್ಯರು, ಸಲಹಾ ಸಮಿತಿ ಸದಸ್ಯರ ಸಹಕಾರ ಮತ್ತು ಸಿಬ್ಬಂದಿಗಳ ಪ್ರಯತ್ನದಿಂದ ಸಂಘವು ಪ್ರಗತಿ ಕಾಣುತ್ತಿದೆ ಎಂದರು.


ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಸುಂದರ ಗೌಡ ನಡುಬೈಲು ಮಾತನಾಡಿ, 10 ಶಾಖೆ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಎಲ್ಲಾ ಶಾಖೆಗಳಲ್ಲೂ ಅತ್ಯುತ್ತಮ ವ್ಯವಹಾರ ನಡೆಯುತ್ತಿದೆ. ಎಲ್ಲಾ ಜಾತಿ, ಧರ್ಮಗಳ ಗ್ರಾಹಕರ ಆರ್ಥಿಕ ಪ್ರಗತಿಗೆ ಸಹಕರಿಸುವ ಮೂಲಕ ಮಾದರಿ ಸಂಘವಾಗಿ ಬೆಳೆದಿದೆ ಎಂದರು. ಸಂಘದ ಉಪಾಧ್ಯಕ್ಷ ರಾಮಕೃಷ್ಣ ಗೌಡ ಯು.ಪಿ., ನಿರ್ದೇಶಕರಾದ ಜಿನ್ನಪ್ಪ ಗೌಡ ಮಳುವೇಲು, ಸುದರ್ಶನ ಗೌಡ ಕೆ., ಪ್ರವೀಣ್ ಕುಂಟ್ಯಾನ, ಸುಪ್ರೀತಾರವಿಚಂದ್ರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ ಕೆ., ಶ್ರೀಧರ ಗೌಡ ಕಣಜಾಲು, ಶಾಖಾ ಸಲಹಾ ಸಮಿತಿ ಗೌರವ ಸಲಹೆಗಾರರಾದ ಈಶ್ವರ ಗೌಡ ಪಜ್ಜಡ್ಕ, ನಾಗಪ್ಪ ಗೌಡ ಮರುವಂತಿಲ, ಸದಸ್ಯರಾದ ಚಕ್ರಪಾಣಿ ಬಾಕಿಲ, ರಾಮಣ್ಣ ಗೌಡ ಬಿ.ದೋಳ, ಅಶೋಕ ಗೌಡ ಪಜ್ಜಡ್ಕ, ಶೇಖರ ಗೌಡ ಕಟ್ಟಪುಣಿ, ಶಿವಣ್ಣ ಗೌಡ ಕಕ್ವೆ, ಕೇಶವ ಗೌಡ ಆಲಡ್ಕ, ವಿರೇಂದ್ರ ಗೌಡ ಪಾಲೆತ್ತಡ್ಡ, ಸದಾನಂದ ಗೌಡ ಕುಂಟ್ಯಾನ, ರಾಮಣ್ಣ ಗೌಡ ಸುರುಳಿ, ಬಾಲಕೃಷ್ಣ ಗೌಡ ಸಂಪ್ಯಾಡಿ, ತಿಮ್ಮಪ್ಪ ಗೌಡ ಸಂಕೇಶ, ಸುಂದರ ಗೌಡ ಕುಂಡಡ್ಕ, ಪದ್ಮಪ್ಪ ಗೌಡ ಕೆದುಂಬಾಡಿ, ಮಂಜಪ್ಪ ಗೌಡ ಕಜೆ, ಭವಾನಿಶಂಕರ ಗೌಡ ಪರಂಗಾಜೆ, ಪ್ರವರ್ತಕರಾದ ಗಣಪಯ್ಯ ಗೌಡ, ಗ್ರಾಹಕರಾದ ಉಗ್ಗಪ್ಪ ಗೌಡ ಮರುವಂತಿಲ, ನಾರ್ಣಪ್ಪ ಗೌಡ ಕೆಮ್ಮಿಂಜೆ, ರಾಮಣ್ಣ ಗೌಡ ಪರಾರಿ, ಶಿವರಾಮ ಗೌಡ ಆತೂರು, ಲಲಿತಾ ಬಾಕಿಲ, ಮೇದಪ್ಪ ಗೌಡ ಶರವೂರು, ದೇವಪ್ಪ ಗೌಡ ಬರೆಂಬೆಟ್ಟು, ಜನಾರ್ದನ ಗೌಡ ತೋಟಂತಿಲ, ಪೂವಪ್ಪ ಗೌಡ ಇಚ್ಚೂರು, ಕುಶಾಲಪ್ಪ ಗೌಡ ಸುರುಳಿ, ಶೀನಪ್ಪ ಕೊಂಡಾಡಿಕೊಪ್ಪ, ಹರೀಶ್ ಏಂತಡ್ಕ, ಹರೀಶ್ ಲತ್ತಂಡೆಕಾಡು, ಅಬ್ದುಲ್ ರಹಿಮಾನ್, ಕಮಲಾಕ್ಷ ರೈ, ಶಶಿಕಿರಣ್ ಆಲಂಕಾರು, ಸಂಘದ ಪುತ್ತೂರು ಶಾಖಾ ವ್ಯವಸ್ಥಾಪಕ ವಿನೋದ್‌ರಾಜ್, ಕಡಬ ಶಾಖಾ ವ್ಯವಸ್ಥಾಪಕ ಶಿವಪ್ರಸಾದ್, ಕುಂಬ್ರ ಶಾಖಾ ವ್ಯವಸ್ಥಾಪಕ ಹರೀಶ್ ವೈ, ಕಾಣಿಯೂರು ಶಾಖಾ ವ್ಯವಸ್ಥಾಪಕಿ ಪದ್ಮಶ್ರೀ, ಉಪ್ಪಿನಂಗಡಿ ಶಾಖಾ ಸಿಬ್ಬಂದಿ ಭವಿತ್‌ರಾಜ್, ನೆಲ್ಯಾಡಿ ಶಾಖಾ ಸಿಬ್ಬಂದಿ ಅಜಿತ್, ವೆಂಕಟ್ರಮಣ ಸಹಕಾರ ಸಂಘದ ಆಲಂಕಾರು ಶಾಖಾ ಮೇನೇಜರ್, ಸಿಬ್ಬಂದಿಗಳು, ಬಂಟ್ವಾಳ ಸಮಾಜ ಸೇವಾ ಸಹಕಾರ ಸಂಘದ ಆಲಂಕಾರು ಶಾಖಾ ಸಿಬ್ಬಂದಿಗಳು ಸೇರಿದಂತೆ ಹಲವು ಗ್ರಾಹಕರು ಭೇಟಿ ನೀಡಿ ಶುಭಹಾರೈಸಿದರು.


ಸಂಘದ ನಿರ್ದೇಶಕಿ, ಆಲಂಕಾರು ಶಾಖಾ ಸಲಹಾ ಸಮಿತಿ ಅಧ್ಯಕ್ಷೆಯೂ ಆದ ತೇಜಸ್ವಿನಿಶೇಖರ ಗೌಡ ಸ್ವಾಗತಿಸಿ, ಶಾಖಾ ಮೇನೇಜರ್ ಪ್ರೀತಂ ಎಂ.ವಂದಿಸಿದರು. ಸಿಬ್ಬಂದಿಗಳಾದ ನವ್ಯ ಪಿ., ರಾಜೇಶ್ ಪಿ., ಪಿಗ್ಮಿ ಸಂಗ್ರಾಹಕರಾದ ನವೀನ್, ಕೀರ್ತಿಕಾ ಸಹಕರಿಸಿದರು.

LEAVE A REPLY

Please enter your comment!
Please enter your name here