







ಪುತ್ತೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವಂತಹ ಸುಮಾರು 70 ಸಾವಿರ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುತ್ತೇವೆ ಎಂಬ ಭರವಸೆಯನ್ನು ನೂತನ ಮುಖ್ಯಮಂತ್ರಿಗಳು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ವ್ಯಾಪ್ತಿಯಲ್ಲಿನ 125 ನಾಗರಿಕ ಸೇವಾ ಮತ್ತು ಸಶಸ್ತ್ರ ಪೊಲೀಸ್ ಹುದ್ದೆ ಜೊತೆಗೆ 5 ತಾಲೂಕುಗಳಲ್ಲಿ ಸುಮಾರು 70 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿಯು ನಡೆಯಲಿದ್ದು , ಅವಕಾಶದ ದೊಡ್ಡದೊಂದು ಪ್ರಪಂಚ ಯುವ ಪೀಳಿಗೆಯ ಮುಂದಿದ್ದು ,ಯುವಜನತೆ ಇಂತಹ ಸುವರ್ಣವಕಾಶವನ್ನು ಎಂದೂ ಕೈ ತಪ್ಪದಂತೆ ಅತೀ ಜಾಣತನದಿಂದ ಬಳಸಿಕೊಳ್ಳಿರಿಯೆಂದು ಪುತ್ತೂರು ವಿಭಾಗದ ಡಿ ವೈ ಎಸ್ ಪಿ ಪ್ರಮೋದ್ ಕುಮಾರ್ ಬಿ ಇವರು ವಿವಿಧ ಹುದ್ದೆಗಳಿಗೆ ತರಬೇತಿ ಪಡೆಯುತ್ತಿರುವಂತಹ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗಳಿಗೆ ತರಬೇತಿ ಪ್ರಾರಂಭವಾಗಿದ್ದು, ತರಬೇತಿಯನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದ ಅವರು ಬಳಿಕ ಮಾತನಾಡಿ , ಕರಾವಳಿ ಭಾಗದಲ್ಲಿ ಸರಕಾರಿ ಹುದ್ದೆಗಳಿಗೆ ಪ್ರಯತ್ನಪಡುವವರ ಸಂಖ್ಯೆ ಅತೀ ಕಡಿಮೆಯಿದ್ದು , ಇಂತಹ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿ ಯುವ ಜನತೆಗೆ ಜಾಗೃತಿಯನ್ನು ಮೂಡಿಸಿ ತರಬೇತಿ ನೀಡುವುದರ ಮೂಲಕ ಸರಕಾರಿ ಹುದ್ದೆಗಳಿಗೆ ಕರಾವಳಿ ಭಾಗದಿಂದಲೂ ಆಭ್ಯರ್ಥಿಗಳು ಆಯ್ಕೆಯಾಗುತ್ತಾರೆಂಬುದನ್ನು ನಿರೂಪಿಸಿದೆ.



ಪೋಲಿಸ್ ಸೇವೆಗಳಿಗೆ ಹೆಚ್ಚು ಸಂಖ್ಯೆಯಲ್ಲಿ ಯುವ ಜನತೆ ಸೇರುವಂತಾಗಬೇಕುಯೆನ್ನುವ ನಿಟ್ಟಿನಲ್ಲಿ ಇಲಾಖೆಯು ಕೂಡ ಸ್ಥಳೀಯ ಅಭ್ಯರ್ಥಿಗಳೇ ಆಯ್ಕೆಯಾಗಬೇಕುನ್ನುವ ಪ್ರಯತ್ನವನ್ನು ಮಾಡುತ್ತಿದೆ.
ಸ್ಥಳೀಯ ಅಭ್ಯರ್ಥಿ ಆಯ್ಕೆಯಾದರೇ , ಇಲ್ಲಿನ ಜನತೆಯ ನಾಡಿಮಿಡಿತ, ಆಚಾರ ವಿಚಾರಗಳ ಅನುಭವ ಸುಲಭವಾಗಿ ತಿಳಿಯಬಹುದು ಹಾಗೂ ಸ್ಥಳೀಯ ಯಾವುದೇ ಘಟನೆ ನಿಯಂತ್ರಿಸಲು ಇಲಾಖೆಗೂ ಸಾಧ್ಯ. ಸದ್ಯ ಸರಕಾರ ಸುಮಾರು 70,000 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದ್ದು, ನೇಮಕಾತಿಗಳ ಹಬ್ಬವೇ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿ ಅವರು , ಮಾದಕ ದ್ರವ್ಯಗಳಿಗೆ ಯುವಸಮುದಾಯ ಬಲಿಯಾಗುತ್ತಿರುವ ಬಗ್ಗೆಯೂ ಜಾಗೃತಿಯನ್ನು ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಗೆ ಬಲಿಯಾಗದೆ ಸದೃಢ ಬದುಕನ್ನು ಕಟ್ಟಿಕೊಳ್ಳುವಂತೆ ಕರೆ ನೀಡಿದರು. ಸರಸ್ವತಿ ಒಲಿದರೇ ಖಂಡಿತವಾಗಿಯೂ ಲಕ್ಷ್ಮೀ ಬಂದೇ ಬರುವಳು ಆದರೇ ,ಲಕ್ಷ್ಮೀ ಹಿಂದೆ ಹೋದರೇ ಖಂಡಿತವಾಗಿಯೂ ಅಡ್ಡ ದಾರಿಯಲ್ಲಿ ಸಾಗುವ ಸಾಧ್ಯತೆಯಿದೆ.ಆದರಿಂದ ಆಶಾಭಾವನೆ ಹೊಂದಿ , ಭವಿಷ್ಯವನ್ನು ಸುಂದರ ಮಾಡಿಕೊಳ್ಳಿಯೆಂದೇಳಿ ಹಾರೈಸಿದರು.




ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಐ.ಎ.ಎಸ್ ,ಕೆ ಎ ಎಸ್ ಪರೀಕ್ಷೆಗಳ ಪ್ರಖ್ಯಾತ ತರಬೇತುದಾರ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಆಗಮಿಸಿದ್ದ , ವಿದ್ಯಾಮಾತಾ ಅಕಾಡೆಮಿ ಇದರ ಗೌರವ ತರಬೇತುದಾರರಾದ ರಘುನಾಥ್ ರವರು ” ನಾನು ರಾಜ್ಯದಾದ್ಯಂತ ಹತ್ತು ಹಲವಾರು ತರಬೇತಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ವಿದ್ಯಾಮಾತಾ ಅಕಾಡೆಮಿಯಲ್ಲಿ ಎಲ್ಲಿಯೂ ಇಲ್ಲದ ಶಿಸ್ತು,ಬದ್ಧ ಶಿಕ್ಷಣ , ಡಿಜಿಟಲ್ ತರಬೇತಿ ವ್ಯವಸ್ಥೆ, ಗ್ರಂಥಾಲಯ ಇವೆಲ್ಲವೂ ಅಳವಡಿಸಲಾಗಿದ್ದು , ಇವನ್ನೆಲ್ಲ ಯುವಸಮುದಾಯ ಉಪಯೋಗಿಸಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ರವರು ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿ ಸ್ವಾಗತಿಸಿದರು. ಆ ಬಳಿಕ ವಿದ್ಯಾರ್ಥಿಗಳು ಅತಿಥಿಗಳಿಗೆಲ್ಲಾ ಪುಸ್ತಕ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ, ವಿದ್ಯಾಮಾತಾ ಅಕಾಡೆಮಿಯ ಹಿತೈಷಿ ಮನೋಹರ್ ರೈ ರವರು, ಅಕಾಡೆಮಿಯ ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ ಹಾಗೂ ತರಬೇತುದಾರರು, ವಿದ್ಯಾರ್ಥಿಗಳು ಹಾಜರಿದ್ದರು.









