







ಕೆಯ್ಯೂರು :ಕೆ ಪಿ ಎಸ್ ಕೆಯ್ಯೂರಿನ ಶಾಲಾ ನಾಯಕ ಹಾಗೂ ಉಪನಾಯಕ ಸ್ಥಾನಕ್ಕೆ ಪ್ರಜಾಪ್ರಭುತ್ವ ಮಾದರಿಯ ಚುನಾವಣೆ ನಡೆಸಲಾಯಿತು. ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಹಾಗೂ ವಿ ವಿ ಪ್ಯಾಟ್ ಗಳನ್ನು ಒಳಗೊಂಡ ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಮತದಾನದ ಮಾದರಿಯಲ್ಲೇ ಚುನಾವಣೆ ನಡೆಸಲಾಯಿತು.



ಶಿಕ್ಷಕರು ವಿವಿಧ ಚುನಾವಣಾ ಅಧಿಕಾರಿಗಳ ಜವಾಬ್ದಾರಿ ನಿರ್ವಹಿಸಿದರು. ಮತದಾರರ ಎಡಗೈ ತೋರುಬೆರಳಿಗೆ ಅಳಿಸಲಾರದ ಶಾಯಿಯ ಗುರುತನ್ನು ಕೂಡಾ ಹಾಕಲಾಯಿತು. ತಲಾ ಮೂವರು ಅಭ್ಯರ್ಥಿಗಳ ನಡುವಿನ ಬಿರುಸಿನ ಸ್ಪರ್ಧೆಯಲ್ಲಿ ಶಾಲಾ ನಾಯಕನಾಗಿ ಮಹಮ್ಮದ್ ಆಬಿದ್ ಬೀ ಕೆ ಎಚ್ ಹಾಗೂ ಉಪನಾಯಕನಾಗಿ ಪ್ರಣೀತ್ ಪಿ ಜೆ ಆಯ್ಕೆಯಾದರು.



ಮಂತ್ರಿ ಮಂಡಲದ ಉಳಿದ ಸದಸ್ಯರನ್ನು ಶಿಕ್ಷಕರು ನಾಮನಿರ್ದೇಶನ ಮಾಡುವ ಮೂಲಕ ಆರಿಸಲಾಯಿತು. ವಿರೋಧ ಪಕ್ಷದ ನಾಯಕಿ- ರಮ್ಲತ್ ಬೀವಿ, ಸಭಾಪತಿ- ಅನ್ವಿತಾ ರೈ, ಗೃಹ ಮಂತ್ರಿಗಳಾಗಿ ಬಿ. ಶಿವಭಟ್, ಕಿಶನ್ ಎಂ ಮತ್ತು ಧನುಷ್ ಕೆ, ಶಿಕ್ಷಣ ಮಂತ್ರಿಗಳಾಗಿ ಅನುಷಾ, ಸಮರ್ಥ್ ಕೆ ಹಾಗೂ ಫಾತಿಮತ್ ಅಫೀಫಾ, ಆಹಾರ ಮಂತ್ರಿಗಳಾಗಿ ಮಹಮ್ಮದ್ ಶಮ್ಮಾಸ್, ಆಯುಷ್ ಬಲ್ಲಾಳ್ ಹಾಗೂ ಮಹಮ್ಮದ್ ಶಿಯಾಬುದ್ದಿನ್, ಸ್ವಚ್ಛತಾ ಮಂತ್ರಿಗಳಾಗಿ ಯಶ್ವಿತಾ ಸಿ ಎಚ್, ಯಸ್ಮಿ ಹಾಗೂ ಹರ್ಷಿತ್, ಕ್ರೀಡಾ ಮಂತ್ರಿಗಳಾಗಿ ಮಹಮ್ಮದ್ ರುಶೈದ್, ಶಫೀಕ್ ಹಾಗೂ ಆಯಿಷತ್ ಶಿಫಾನ, ಸಾಂಸ್ಕೃತಿಕ ಮಂತ್ರಿಗಳಾಗಿ ಸಿಂಧೂರ ಎಸ್, ಆದ್ಯ ಆರ್ ಜೆ ಹಾಗೂ ಗ್ಲೆನ್ ರಿಶೋನ್ ಡಿಸೋಜ, ವಾರ್ತಾ ಮಂತ್ರಿಗಳಾಗಿ ಪೂಜಾಶ್ರೀ ಡಿ, ತನುಶ್ರೀ ಹಾಗೂ ತನುಶ್ರೀ ಕೆ, ನೀರಾವರಿ ಮಂತ್ರಿಗಳಾಗಿ ಮಹಮ್ಮದ್ ಸಾದತ್, ಧನುಷ್ ಹಾಗೂ ಮಹಮ್ಮದ್ ಸಫ್ವಾನ್, ಅರೋಗ್ಯ ಮಂತ್ರಿಗಳಾಗಿ ನಿಶಾ ಡಿ ಪಿ, ಅನನ್ಯ ಕೆ ವಿ ಹಾಗೂ ಪ್ರತಿಭಾ, ಕೃಷಿ ಮತ್ತು ತೋಟಗಾರಿಕಾ ಮಂತ್ರಿಗಳಾಗಿ ಚಂದನ್, ದಿವಿತ್ ಜೆ ರೈ ಹಾಗೂ ತನ್ವಿತ್ ಆಯ್ಕೆಯಾದರು.

ಸಮಾಜ ವಿಜ್ಞಾನ ಶಿಕ್ಷಕಿ ಮೋಲಿ ವಿಲ್ಮಾ ಪಿಂಟೊ ಚುನಾವಣಾ ಪ್ರಕ್ರಿಯೆಯ ಕುರಿತು ಮಕ್ಕಳಿಗೆ ವಿವರಿಸಿ, ವಿದ್ಯಾರ್ಥಿಗಳಿಂದ ನಾಮಪತ್ರ ಸ್ವೀಕರಿಸಿ, ಪರಿಶೀಲಿಸಿ, ಚುನಾವಣಾ ಪ್ರಚಾರಕ್ಕೆ ಅವಕಾಶ ಕಲ್ಪಿಸಿ ಪ್ರಜಾಪ್ರಭುತ್ವದ ಕಲ್ಪನೆಯನ್ನು ಮೂಡಿಸಿದರು. ಶಾಲಾ ಉಪಪ್ರಾಂಶುಪಾಲರಾದ ಅರುಣ್ ಕುಮಾರ್ ರವರ ಅಧ್ಯಕ್ಷತೆಯ ಪೋಷಕರ ಸಭೆಯ ಸಂದರ್ಭದಲ್ಲಿ ನೂತನ ಮಂತ್ರಿ ಮಂಡಲದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.










