






ಪುತ್ತೂರು: ಅಭಿವೃದ್ಧಿ ಹೊಂದುತ್ತಿರುವ ನಗರಕ್ಕೆ ಕೊಡುಗೆಯಾಗಿ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಪಡೀಲ್ನಲ್ಲಿರುವ ಚಾಮುಂಡೇಶ್ವರಿ ಗ್ಯಾರೇಜ್ ಬಳಿ ಅಟ್ಲಸ್ ಡೋರ್ಸ್, ವಿಂಡೋಸ್ ಮತ್ತು ಹಾರ್ಡ್ವೇರ್ನ ಬೃಹತ್ ಮಳಿಗೆ ಜೂ.29 ರಂದು ಶುಭಾರಂಭಗೊಂಡಿತು.


ಮಳಿಗೆ ಉದ್ಘಾಟಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿನಲ್ಲಿ ಶಶಿಧರನ್ ನಾಯರ್ ಅವರು ಅಟ್ಲಸ್ ಎಂಬ ನೂತನ ಮಳಿಗೆಯನ್ನು ಆರಂಭಿಸಿರುವುದು ಸಂತಸದ ವಿಚಾರ. ಮನೆ ನಿರ್ಮಾಣಕ್ಕೆ ಅಗತ್ಯವಿರುವ ಬಾಗಿಲುಗಳು, ಕಿಟಕಿಗಳು ಹಾಗೂ ಇತರೆ ಗುಣಮಟ್ಟದ ಸಾಮಗ್ರಿಗಳು ಇಲ್ಲಿ ಲಭ್ಯವಾಗಲಿವೆ. ಇಂತಹ ಹೊಸ ಉದ್ಯಮಗಳು ಆರಂಭವಾಗುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರ ಜೊತೆಗೆ ನಗರದ ಆರ್ಥಿಕ ಬೆಳವಣಿಗೆಗೂ ಉತ್ತೇಜನ ಸಿಗುತ್ತದೆ ಎಂದು ಹೇಳಿ ಶುಭಹಾರೈಸಿದರು.




ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ ಅವರು ಉಪಸ್ಥಿತರಿದ್ದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಪಾಲುದಾರರಾದ ರಿಷಿನ್, ಶ್ರೀಜಿತ್, ಕಟ್ಟಡ ಮಾಲಕ ಎ.ಎಂ. ಹಸೈನರ್ ಹಾಜಿ ಆತೂರು, ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಶಕೂರ್ ಹಾಜಿ, ಎಸ್.ಜಿ. ಪ್ಯೂರ್ ಮಸಾಲ ಸಂಸ್ಥೆಯ ಪಾಲುದಾರ ಗಿರಿಧರ್ ಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮಳಿಗೆಯ ಮಾಲಕ ಶಶಿಧರನ್ ನಾಯರ್ ಹಾಗೂ ಅವರ ಪತ್ನಿ ಪ್ರೇಮಲತಾ, ಪುತ್ರರಾದ ಪ್ರವೀಣ್ ಮತ್ತು ಅಜಯ್, ಸೊಸೆಯಂದಿರಾದ ಶಾರಿಕಾ ಹಾಗೂ ಅಶ್ವಿನಿ ಅವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಅಟ್ಲಸ್ ಸಿಬ್ಬಂದಿ ಸಹಕರಿಸಿದರು.

ಕೈಗೆಟಕುವ ದರದಲ್ಲಿ ಫರ್ನಿಚರ್ಗಳು
ಅಟ್ಲಸ್ ಮಳಿಗೆಯಲ್ಲಿ ಸಾಗುವಾಣಿ ಮರದಿಂದ ತಯಾರಿಸಲಾದ ರೆಡಿಮೇಡ್ ಡೋರ್ ಫ್ರೇಮ್ಗಳು, ಬಾಗಿಲುಗಳು ಹಾಗೂ ಕಿಟಕಿಗಳು ಕೈಗೆಟಕುವ ದರದಲ್ಲಿ ಲಭ್ಯವಿವೆ. ಇದರೊಂದಿಗೆ ಮೆಟಲ್ ಡೋರ್ಗಳು ಮತ್ತು ವಿಂಡೋಗಳೂ ದೊರೆಯುತ್ತವೆ. ಮನೆ ಹಾಗೂ ಕಚೇರಿಗಳಿಗೆ ಅಗತ್ಯವಿರುವ ಸೋಫಾ, ಮಂಚ, ಡೈನಿಂಗ್ ಸೆಟ್ ಸೇರಿದಂತೆ ವಿವಿಧ ಮಾದರಿಯ ಫರ್ನಿಚರ್ಗಳನ್ನು ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಆರ್ಡರ್ ಪಡೆದು ತಯಾರಿಸಿಕೊಡಲಾಗುತ್ತದೆ. ಅಲ್ಲದೆ, ಮೋರ್ಟಿಸ್ ಲಾಕ್ಗಳು, ಡೋರ್ ಫಿಟ್ಟಿಂಗ್ಗಳು ಸೇರಿದಂತೆ ವಿವಿಧ ಹಾರ್ಡ್ವೇರ್ ಸಾಮಗ್ರಿಗಳೂ ಇಲ್ಲಿ ಲಭ್ಯವಿವೆ. ಹೆಚ್ಚಿನ ಮಾಹಿತಿಗಾಗಿ 08251 455252, 94972 91184 ಅಥವಾ 93834 74026 ಸಂಪರ್ಕಿಸುವಂತೆ ಮಾಲಕ ಶಶಿಧರನ್ ನಾಯರ್ ತಿಳಿಸಿದ್ದಾರೆ.









