ರೋಟರಿ ಜಿಲ್ಲೆ 3181, ವಲಯ 5ರ ವಲಯ ಸೇನಾನಿ ಶಶಿಧರ್ ಕಿನ್ನಿಮಜಲು

0

ಪುತ್ತೂರು:ರೋಟರಿ ಜಿಲ್ಲೆ 3181, ವಲಯ 5ರ ವಲಯ ಸೇನಾನಿಯಾಗಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ನಿಕಟಪೂರ್ವ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ಆಯ್ಕೆಯಾಗಿದ್ದಾರೆ.

ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಕಿನ್ನಿಮಜಲು ಗರಡಿ ಮನೆತನದ ದಿ.ಗಿರಿಯಪ್ಪ ಪೂಜಾರಿ ಮತ್ತು ಶೀಲಾವತಿ ದಂಪತಿಯ ಪುತ್ರರಾದ ಶಶಿಧರ್ ಕಿನ್ನಿಮಜಲುರವರು ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷರಾಗಿ, ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಹಾಗೂ ವಲಯ ಸಂಚಾಲಕರಾಗಿ ಮತ್ತು ಯುವವಾಹಿನಿ ಕೇಂದ್ರ ಸಮಿತಿಯಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. 

ಧಾರ್ಮಿಕ ಬದುಕಿನಲ್ಲಿ ಅವರು ಉಳ್ಳಾಲ ಕುರಿಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿಯಾಗಿ, ಬ್ರಹ್ಮಬೈದೇರ್ಕಳ ಗರಡಿ  ಕಿನ್ನಿಮಜಲು ಇದರ ಆಡಳಿತ ಮೊಕ್ತೇಸರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನಲ್ಲಿ ಅವರು ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು 2025-26 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇಂಜಿನಿಯರ್ ಪದವೀಧರ ಆಗಿರುವ ಶಶಿಧರ್ ಕಿನ್ನಿಮಜಲುರವರು ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಜಿಲ್ಲಾ ಸಮಾಲೋಚಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ನಿ ಅರ್ಪಿತಾ ಮತ್ತು ಮಕ್ಕಳಾದ ಆಶ್ರಯ್, ಆಶ್ನಿರವರೊಂದಿಗೆ ಕುರಿಯದಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here