ಕೋಡಿಂಬಾಡಿ : ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

0

ಪುತ್ತೂರು :  ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಕೋಡಿoಬಾಡಿ ಇದರ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಜೂ. 29 ರಂದು ನಡೆಯಿತು.

ನೂತನ ಅಧ್ಯಕ್ಷರಾಗಿ ಸ್ಫೂರ್ತಿ ರಾಜಮಣಿ ರೈ ಮಠಂತಬೆಟ್ಟು, ಉಪಾಧ್ಯಕ್ಷರಾಗಿ ಗೀತಾ ರವನ್ನು ಆಯ್ಕೆ ಮಾಡಲಾಯಿತು. ಲಲಿತಾ, ಲಕ್ಷ್ಮೀಶ, ವಿದ್ಯಾ, ಸುನಂದಾ, ಯತೀಶ್ ಶೆಟ್ಟಿ, ಚಿತ್ರಾ, ರತ್ನಾಕರ ಪ್ರಭು, ಜಯರಾಮ, ಸುಜಾತ, ವಾಸುದೇವ, ಅಶ್ರಫ್, ಬಾಲಕೃಷ್ಣ, ಸರೋಜಿನಿ, ರಾಜೇಶ್ವರಿ, ಚಂದ್ರಶೇಖರ ಹಾಗೂ ಪವಿತ್ರ ರವರನ್ನು ನೂತನ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ನಾಮನಿರ್ದೇಶಿತ ಸದಸ್ಯರಾಗಿ ಶಾಲಾ ಪ್ರಭಾರ ಮುಖ್ಯ ಗುರು ಭಾರತಿ ಸ್ವರಮನೆ, ಕೋಡಿoಬಾಡಿ ಅರೋಗ್ಯ ಸಹಾಯಕಿ ಶೀಲಾ, ಅಂಗನವಾಡಿ ಕಾರ್ಯಕರ್ತೆ ಸುಮಲತಾ, ಹಿರಿಯ ಶಿಕ್ಷಕಿ ಕವಿತಾ ಹಾಗೂ ಶಾಲಾ ನಾಯಕ ಚರಿತ್ ಕುಮಾರ್ ರವರನ್ನು ಆಯ್ಕೆ ಮಾಡಲಾಯಿತು.

ಶಾಲಾ ಪ್ರಭಾರ ಮುಖ್ಯ ಗುರು ಭಾರತಿ ಸ್ವರಮನೆ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ನೂತನ ಅಧ್ಯಕ್ಷೆ ಸ್ಫೂರ್ತಿ ರಾಜಮಣಿ ರೈ ಸರ್ವರ ಸಹಕಾರ ಕೋರಿ ವಂದಿಸಿದರು. ಶಾಲಾ ಸಹ ಶಿಕ್ಷಕಿಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here