ಕೊಕ್ಕಡ ಜೆಸಿಐ ಕಪಿಲಾ ಘಟಕದ ಜೂನ್ ತಿಂಗಳ ಸಭೆ : ಸಿಂಧು ಸಮ್ಮೇಳನದಲ್ಲಿ ಭಾಗವಹಿಸಲು ನಿರ್ಣಯ

0

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದ ಜೂನ್ ತಿಂಗಳ ಸಾಮಾನ್ಯ ಸಭೆ ಜೂ. 29ರಂದು ಕೊಕ್ಕಡದ ಎಜುನೆಸ್ಟ್ ಅಕಾಡೆಮಿ ಕೇಂದ್ರದಲ್ಲಿ ನಡೆಯಿತು. ಘಟಕಾಧ್ಯಕ್ಷ ರಿತೇಶ್ ಎಂ. ಸ್ಟ್ರೆಲ್ಲಾ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ನಿರ್ಣಯಗಳು:
ವಲಯ ಮಟ್ಟದಲ್ಲಿ ನಡೆಯುವ ಲೇಡಿ ಜೆಸಿ ಹಾಗೂ ಜೂನಿಯರ್ ಜೆಸಿ ಸಮ್ಮೇಳನ ‘ಸಿಂಧು’ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಣಯಿಸಲಾಯಿತು.
ಮುಂದಿನ ತಿಂಗಳಲ್ಲಿ ಫಲ್ಗುಣಿ ಪ್ರಾಂತ್ಯದ ವಲಯ ಉಪಾಧ್ಯಕ್ಷರ ಎರಡನೇ ಅಧಿಕೃತ ಭೇಟಿಗೆ ತಯಾರಿ ನಡೆಸಲು ತೀರ್ಮಾನಿಸಲಾಯಿತು.

ಮಧ್ಯಾಂತರ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಪಡೆದ ಘಟಕದ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಲಾಯಿತು. ವಲಯಾಧ್ಯಕ್ಷರಿಂದ ಬಿಡುಗಡೆಯಾದ ‘ಕಪಿಲಾವಾಣಿ’ ಮೊದಲ ಸಂಚಿಕೆಯ ಸಂಪಾದಕ ಜಸ್ವಂತ್ ಪಿರೇರಾ ಅವರಿಗೆ ಅಭಿನಂದಿಸಲಾಯಿತು. ವಲಯ ಉಪಾಧ್ಯಕ್ಷರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜಿತೇಶ್ ಎಲ್. ಪಿರೇರಾ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಜೂನ್ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿದ ಜೂನಿಯರ್ ಜೆಸಿ ಅಧ್ಯಕ್ಷೆ ಆದ್ಯಾ ಜೈನ್, ಜೊತೆ ಕಾರ್ಯದರ್ಶಿ ಜೋಯ್ ಬೊತೆಲ್ಲೊ, ಜೆಸಿಂತಾ ಡಿಸೋಜ ಅವರಿಗೆ ಶುಭ ಹಾರೈಸಲಾಯಿತು. ಜೆಸಿ ವಾಣಿ ಹಾಗೂ ಧ್ಯೇಯ ವಾಕ್ಯವನ್ನು ದೀಪಾ ವಿ. ವಾಚಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಡಾ. ಶೋಭಾ ಪಿ., ಕೆ. ಶ್ರೀಧರ ರಾವ್, ಸಂತೋಷ್ ಜೈನ್, ವಿಕ್ಟರ್ ಸುವಾರಿಸ್, ಚಂದನಾ ಪಿ., ಜೋಸೆಫ್ ಪಿರೇರಾ ಹಾಗೂ ದಕ್ಷಾ ಜೈನ್ ಭಾಗವಹಿಸಿದ್ದರು. ಕಾರ್ಯದರ್ಶಿ ಜೋಯಲ್ ಪಿರೇರಾ ವಂದಿಸಿದರು.

LEAVE A REPLY

Please enter your comment!
Please enter your name here