







ಪುತ್ತೂರು: ಶಿವಳ್ಳಿ ಸಂಪದ ಬೊಳುವಾರು ವಲಯದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.


2026-28ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಅನಂತ ಕೃಷ್ಣ ಪಡ್ಡಿಲ್ಲಾಯ, ಗೌರವಾಧ್ಯಕ್ಷರಾಗಿ ಬಲರಾಮ ಆಚಾರ್ಯ ಜಿ.ಎಲ್.,ಕಾರ್ಯದರ್ಶಿಯಾಗಿ ಹರಿಪ್ರಸಾದ್ ದಾಳಿಂಬ, ಕೋಶಾಧಿಕಾರಿಯಾಗಿ ಅನಂತ ಪದ್ಮನಾಭ ಕಡಂಬಳಿತ್ತಾಯ ಸಾಲ್ಮರ ಆಯ್ಕೆಯಾದರು. ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.



ವೇದಿಕೆಯಲ್ಲಿ ತಾಲೂಕು ಶಿವಳ್ಳಿ ಸಂಪದ ಅಧ್ಯಕ್ಷ ಸುದೀಂದ್ರ ಕುದ್ದಣ್ಣಾಯ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಕೋಶಾಧಿಕಾರಿ ರಂಗನಾಥ ರಾವ್, ವಲಯಾಧ್ಯಕ್ಷ ಗಣೇಶ ಕೆದಿಲಾಯ, ವಲಯ ಕೋಶಾಧಿಕಾರಿ ಅನಂತ ಪದ್ಮನಾಭ ಕಡಂಬಳಿತ್ತಾಯ, ಮಹಿಳಾ ಸಂಪದ ಅಧ್ಯಕ್ಷೆ ಪ್ರೇಮಲತಾ ರಾವ್, ಗೌರವಾಧ್ಯಕ್ಷೆ ವತ್ಸಲಾರಾಜ್ಞಿ ಉಪಸ್ಥಿತರಿದ್ದರು.
ಸತ್ಯನಾರಾಯಣ ಪೂಜೆಯ ಬಳಿಕ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಸಂಸ್ಕೃತ ಉಪನ್ಯಾಸಕ ಡಾ. ಶ್ರೀಶ ಕುಮಾರ್ ಅವರಿಂದ ‘ಭಕ್ತಿ ಪರಂಪರೆ’ ವಿಷಯದ ಕುರಿತು ಉಪನ್ಯಾಸ ನಡೆಯಿತು.ಸಂಪದದ ಹಿರಿಯ ಸದಸ್ಯರಾದ ಶರತ್ ಕುಮಾರ್, ಎ.ವಿ. ನಾರಾಯಣ, ಸತೀಶ್ ಕೆದಿಲಾಯ, ಶ್ರೀಧರ ಬೈಪಾಡಿತ್ತಾಯ, ಕೃಷ್ಣರಾಜ ಎರ್ಕಾಡಿತ್ತಾಯ, ವಿಷ್ಣು ಮೂರ್ತಿ ಕೆದಿಲಾಯ, ಸುದಾಕರ ನಿಡ್ವಣ್ಣಾಯ, ದಿವಾಕರ ನಿಡ್ವಣ್ಣಾಯ, ನಾಗೇಶ್ ರಾವ್, ಭಾಸ್ಕರ ರಾವ್ ಶೇರ ಹಾಗೂ ಮಹಿಳಾ ಸಂಪದದ ಸದಸ್ಯೆಯರು ಉಪಸ್ಥಿತರಿದ್ದರು.ವಲಯಾಧ್ಯಕ್ಷ ಗಣೇಶ ಕೆದಿಲಾಯ ಸ್ವಾಗತಿಸಿದರು. ಕವನ ಕೆದಿಲಾಯ ಪ್ರಾರ್ಥಿಸಿದರು. ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.










