







ಪುತ್ತೂರು: ಲಯನ್ಸ್ ಜಿಲ್ಲೆ 317-ಡಿ ಇದರ 2025-26ನೇ ಸಾಲಿನ ‘ಅತ್ಯುತ್ತಮ ವಲಯಾಧ್ಯಕ್ಷ’ ಪ್ರಶಸ್ತಿಗೆ ಸುಳ್ಯದ ಡಿಜಿ ಪ್ಲಸ್ ಮಾಲಕರಾದ ಲಯನ್ ಚಂದ್ರಶೇಖರ ನಂಜೆಯವರು ಭಾಜನರಾಗಿದ್ದಾರೆ. ವಲಯಾಧ್ಯಕ್ಷರಾದ ಚಂದ್ರಶೇಖರ ನಂಜೆಯವರ ನೇತೃತ್ವದ ವಲಯ-II ರ ಸುಳ್ಯ, ಸಂಪಾಜೆ ಮತ್ತು ಗುತ್ತಿಗಾರು ಲಯನ್ಸ್ ಕ್ಲಬ್‌ಗಳ ಸೇವೆ ಹಾಗೂ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.



ಜೂ.28ರಂದು ಮಂಗಳೂರಿನಲ್ಲಿ ನಡೆದ ‘ಅವಾರ್ಡ್ಸ್ ನೈಟ್’ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲರಾದ ಲ| ಕುಡ್ಪಿ ಅರವಿಂದ ಶೆಣೈರವರು ‘ಗೋಲ್ಡನ್ ಚೆಯರ್ ಪರ್ಸನ್’ ಪ್ರಶಸ್ತಿ ನೀಡಿ ಗೌರವಿಸಿದರು. ಪುತ್ತೂರು ತಾಲೂಕಿನ ತಿಂಗಳಾಡಿ ನಂಜೆಯವರಾದ ಚಂದ್ರಶೇಖರ ನಂಜೆಯವರು ಸುಳ್ಯ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿ, ಸುಳ್ಯ ಜೇಸಿಸ್‌ನ ಮಾಜಿ ಅಧ್ಯಕ್ಷರಾಗಿ, ಜೇಸಿಸ್ ಸೀನಿಯರ್ ಚೆಂಬರ್‌ನ ಅಧ್ಯಕ್ಷರಾಗಿ, ಭಾರತ ಸೇವಾ ದಳದ ಜಿಲ್ಲಾ ನಿರ್ದೇಶಕರಾಗಿ ಹಾಗೂ ಕೆ.ವಿ.ಜಿ ಸುಳ್ಯ ಹಬ್ಬದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ ಹಲವು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.












