






ಸನ್ಮಾನ | ಪದಾಧಿಕಾರಿಗಳ ಆಯ್ಕೆ | ಅಧಿಕಾರ ಹಸ್ತಾಂತರ


ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಜು.4ರಂದು ಎಪಿಎಂಸಿ ರಸ್ತೆಯಲ್ಲಿರುವ ಸುದ್ದಿ ಅರಿವು ಕೇಂದ್ರದ ಸಭಾಂಗಣದಲ್ಲಿ ನಡೆಯಿತು.



ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿ 2018ರಲ್ಲಿ ಪುತ್ತೂರಿನಲ್ಲಿ ಸಂಘ ಆರಂಭವಾಯಿತು. ಪ್ರಾರಂಭದಲ್ಲಿ 12 ಸದಸ್ಯರನ್ನು ಹೊಂದಿದ ಸಂಘ ಇಂದು 50 ಕ್ಕೂ ಮಿಕ್ಕಿ ಸದಸ್ಯರನ್ನು ಒಳಗೊಂಡಿದೆ. ಕಳೆದ 8 ವರ್ಷಗಳಿಂದ ಸಂಘ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದೆ. ಕಳೆದ ಸಾಲಿನಲ್ಲಿ ಸಂಘದಿಂದ ಆರೋಗ್ಯ, ಶಿಕ್ಷಣ, ಸಾಮಾಜಿಕ ಸೇವೆಗಳಿಗೆ ಸಂಬಂಧಿಸಿ ಉತ್ತಮ ಕಾರ್ಯಗಳನ್ನು ಆಯೋಜಿಸಿದೆ ಎಂದ ಅವರು ಸಂಘದ ಎಲ್ಲಾ ಚಟುವಟಿಕೆಗಳಿಗೆ ನನ್ನ ಬೆಂಬಲ ಇದೆ. ಸಂಘವು ಅಭಿವೃದ್ಧಿ ಹೊಂದಲಿ ಎಂದರು.
ಸಂಘದ ಕಾನೂನು ಸಲಹೆಗಾರ ಕೃಷ್ಣಪ್ರಸಾದ್ ನಡ್ಸಾರ್ ಮಾತನಾಡಿ, ಪತ್ರಕರ್ತರ ಬಗ್ಗೆ ಸಮಾಝದಲ್ಲಿ ಉತ್ತಮ ನಂಬಿಕೆ ಇದೆ. ಪತ್ರಕರ್ತರನ್ನು ಸಮಾಜ ಗಮನಿಸುತ್ತಾ ಇರುತ್ತದೆ. ಪತ್ರಕರ್ತರ ಸಂಘ ಮಾಡಿದ ಉತ್ತಮ ಕೆಲಸಗಳು ಕೂಡ ಸಮಾಜಕ್ಕೆ ತಿಳಿಯುತ್ತದೆ. ಆದುದರಿಂದ ಸಂಘದ ಸಮಾಜಮುಖಿ ಕಾರ್ಯಗಳು ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ಹೇಳಿ ಸಂಘಕ್ಕೆ ನಮ್ಮ ಬೆಂಬಲ ನಿರಂತರ ಇದೆ ಎಂದರು.

ಸಂಘದ ಅಧ್ಯಕ್ಷ ಶ್ರೀದರ್ ರೈ ಕೋಡಂಬು ಮಾತನಾಡಿ, ಈ ಬಾರಿ ಸೇವಾ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಮಾಡಿದ ಕಾರ್ಯಕ್ರಮಗಳಿಂದ ತೃಪ್ತಿ ಮನೋಭಾವ ಬಂದಿದೆ. ಮುಂದೆಯೂ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.
ಪದಾಧಿಕಾರಿಗಳ ಆಯ್ಕೆ, ಅಧಿಕಾರ ಹಸ್ತಾಂತರ:
ಸಂಘದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಪದಾಧಿಕಾರಿಗಳ ಘೋಷಣೆ ಮಾಡಿ ಪದಾಧಿಕಾರಿಗಳನ್ನು ಹೂ ನೀಡಿ ಸ್ವಾಗತಿಸಿದರು. ಪದಾಧಿಕಾರಿಗಳಿಗೆ ಅಧ್ಯಕ್ಷ ಶ್ರೀಧರ್ ರೈ ಕೋಡಂಬು ಸಂಘದ ದಾಖಲೆ ಪುಸ್ತಕ ನೀಡಿ ಅಧಿಕಾರ ಹಸ್ತಾಂತರಿಸಿದರು. ನಿಯೋಜಿತ ಅಧ್ಯಕ್ಷ ಶರತ್ ಕುಮಾರ್ ಪಾರ ಮಾತನಾಡಿ ಎಲ್ಲರ ಸಹಕಾರ ಕೋರಿದರು.
ಸನ್ಮಾನ:
2024-25ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿದ ಮಾಜಿ ಅಧ್ಯಕ್ಷೆ ಶೈಲಾಜಾ ಸುದೇಶ್ರವರನ್ನು ಶಾಲು, ಹಾರ, ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯದರ್ಶಿ ಆದಿತ್ಯ ಈಶ್ವರಮಂಗಲ ವರದಿ ಮಂಡನೆ ಮಾಡಿದರು. ಕೋಶಾಧಿಕಾರಿ ಅಕ್ಷತಾ ರವಿಚಂದ್ರ ಲೆಕ್ಕಪತ್ರ ಮಂಡನೆ ಮಾಡಿದರು. ಸಂಘದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ, ಉಪಾಧ್ಯಕ್ಷ ಶಿವಕುಮಾರ್ ಈಶ್ವರಮಂಗಲ, ಸಂಘಟನಾ ಕಾರ್ಯದರ್ಶಿ ಅಶ್ವಥ್ ಶೆಟ್ಟಿ ದೂಮಡ್ಕ ಹಾಗೂ ಜತೆ ಕಾರ್ಯದರ್ಶಿ ಲೋಕಯ್ಯ ಸಂಪ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಯೋಜಿತ ಅಧ್ಯಕ್ಷ ಶರತ್ ಕುಮಾರ್ ಪಾರ ಸ್ವಾಗತಿಸಿ ನಿಯೋಜಿತ ಕಾರ್ಯದರ್ಶಿ ಚಂದ್ರಕಾಂತ್ ಉರ್ಲಾಂಡಿ ವಂದಿಸಿದರು. ಮಾಜಿ ಕಾರ್ಯದರ್ಶಿ ಲಕ್ಷ್ಮೀಕಾಂತ್ ರೈ ಅನಿಕೂಟೇಲು ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಾ ಪುರಸ್ಕಾರ
ಕಳೆದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕರಾಟೆ ಚಾಂಪಿಯನ್ಶಿಪ್ನಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ, ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾದ, ಸಂಘದ ಸದಸ್ಯ ತಾರಾನಾಥ್ ಮತ್ತು ಜಯಂತಿ ದಂಪತಿ ಪುತ್ರಿ ರಿಷಿಕಾ ಟಿ. ಎಚ್., ಕಳೆದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ ಸಂಘದ ಸದಸ್ಯ ರಮೇಶ್ ಮತ್ತು ಹೇಮಲತ ದಂಪತಿ ಪುತ್ರಿ ಯಾಶಿಕ ಎಂ. ಹಾಗೂ ಕಳೆದ ಇಂಜಿನಿಯರಿಂಗ್ ಪದವಿಯಲ್ಲಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ ಸಂಘದ ಮಾಜಿ ಅಧ್ಯಕ್ಷೆ ಶೈಲಜಾ ಮತ್ತು ಸುದೇಶ್ ಚಿಕ್ಕಪುತ್ತೂರು ದಂಪತಿಯ ಪುತ್ರಿ ಅನುಶ್ರೀರವರನ್ನು ಹಾರ, ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.










