






ಪುತ್ತೂರು: ಪುತ್ತೂರು ಮತ್ತು ಕಡಬ ತಾಲ್ಲೂಕು ವಿಕಲಚೇತನರ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧೋದ್ದೇಶ / ಗ್ರಾಮೀಣ / ನಗರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ ಮತ್ತು ನಿರಾಮಯ ಯೋಜನೆ ಕುರಿತ ತರಬೇತಿ ಕಾರ್ಯಕ್ರಮ ಜುಲೈ 4ರಂದು ನಡೆಯಿತು.


ಪುತ್ತೂರು ತಾಲ್ಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಕಲಚೇತನರ ಇಲಾಖೆ ನೋಡೆಲ್ ಅಧಿಕಾರಿ ಮಂಗಳ ಕಾಳೆ ಮತ್ತು ಪುತ್ತೂರು ತಾಲ್ಲೂಕು ಪಂಚಾಯತ್ ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಉಪಸ್ಥಿತರಿದ್ದರು.ಸಭೆಯಲ್ಲಿ ಪುತ್ತೂರು ಮತ್ತು ಕಡಬ ತಾಲ್ಲೂಕಿನ ಕಾರ್ಯಕರ್ತರ ಪ್ರಗತಿ ಪರಿಶೀಲನೆ ನಡೆಸಲಾಯಿತು. ಬಳಿಕ ನಿರಾಮಯ ಯೋಜನೆಯಡಿ ವಿಕಲಚೇತನರಿಗೆ ನೀಡುವ ವೈದ್ಯಕೀಯ ವೆಚ್ಚಗಳ ಸಹಾಯದ ಬಗ್ಗೆ ಮಾಹಿತಿ ನೀಡಲಾಯಿತು.




ನಿರಾಮಯ ಯೋಜನೆ ಬಗ್ಗೆ ತರಬೇತಿ
ಸಂಪನ್ಮೂಲ ವ್ಯಕ್ತಿಯಾಗಿ ಚೇತನ ಬಾಲ ವಿಕಾಸ ಸೇವಾ ಕೇಂದ್ರ, ಸೇವಾ ಭಾರತಿ ಮಂಗಳೂರು ವಿಶೇಷ ಶಾಲೆಯ ಸ್ವಯಂಸೇವಕ ಗಣರಾಜ ವೈ ಅವರು ನಿರಾಮಯ ಯೋಜನೆಯ ಸವಿವರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪುತ್ತೂರು ತಾಲ್ಲೂಕು ಪಂಚಾಯತ್ನ ನೂತನ ಯೋಜನಾಧಿಕಾರಿ ಶೋಭಾ ಎನ್.ಎಸ್, ಪುತ್ತೂರು ಸರಕಾರಿ ಆಸ್ಪತ್ರೆಯ ನೂತನ ಕಿವಿ-ಮೂಗು-ಗಂಟಲು ತಜ್ಞೆ ಡಾ. ಪುಷ್ಪಲತಾ ಎನ್, ಚೇತನ ಬಾಲ ವಿಕಾಸ ಸೇವಾ ಕೇಂದ್ರದ ಸ್ವಯಂಸೇವಕ ಗಣರಾಜ ವೈ, ಪುತ್ತೂರು ಶಿವಸದನ ಮುರ ವಿಶೇಷ ಚೇತನರ ಪುನರ್ವಸತಿ ಕೇಂದ್ರದ ವಿಶೇಷ ಶಿಕ್ಷಕಿ ರೇಖಾ, ಕಡಬ ತಾಲ್ಲೂಕು ಬೆಥನಿ ಜೀವನ್ ಜ್ಯೋತಿ ಮರ್ದಾಳದ ವಿಶೇಷ ಶಿಕ್ಷಕಿ ಲೆವಿತಾಕ್ಸಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುತ್ತೂರು ತಾಲ್ಲೂಕು ಪಂಚಾಯತ್ ವಿಕಲಚೇತನರ ಸೇವಾ ಕೇಂದ್ರ ಕಚೇರಿ ಮತ್ತು ಪುತ್ತೂರು-ಕಡಬ ತಾಲ್ಲೂಕಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಪರವಾಗಿ ನವೀನ್ ಕುಮಾರ್ ಅವರು ಉಪಸ್ಥಿತ ಗಣ್ಯರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.ಪುತ್ತೂರು ತಾಲ್ಲೂಕು 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸೇಸಪ್ಪ ಸ್ವಾಗತಿಸಿದರು. ಕಡಬ ತಾಲ್ಲೂಕು ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ವಿಜಯಕುಮಾರ್ ಎರ್ಕ ಧನ್ಯವಾದ ಸಮರ್ಪಿಸಿದರು.










