







ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ವಲಯದ ಬನ್ನೂರು ಕಸಬ CSC ಸೇವಾಕೇಂದ್ರದಲ್ಲಿ Digi Pay ಸೇವೆ ಉದ್ಘಾಟನೆ ನಡೆಯಿತು.


ಒಕ್ಕೂಟದ ಅಧ್ಯಕ್ಷೆ ರಮ ಉದ್ಘಾಟನೆ ಮಾಡಿದರು. ನೋಡೆಲ್ ಅಧಿಕಾರಿ ಜೀವನ್ ಮಾತನಾಡಿ Digi Pay ಸೇವೆಯನ್ನು ವಾರದ ನಗದು ಸಂಗ್ರಹಣೆ ದಿನದಂದು ATM CARD/AEPS ಮೂಲಕ ಸದಸ್ಯರ ಬ್ಯಾಂಕ್ ಖಾತೆಯಿಂದ ಸುಲಭವಾಗಿ ಹಣ ಪಡೆಯುವ ವ್ಯವಸ್ಥೆಯಾಗಿದೆ. ಇದು ಒಂದು ಯೋಜನೆಯ ವಿನೂತನ ಕಾರ್ಯಕ್ರಮ ಸಾರ್ವಜನಿಕರು ಹಾಗೂ ಸದಸ್ಯರು ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷೆ ಸುನೀತಾ, ಪದಾಧಿಕಾರಿ ಯೋಗೀಶ್ವರಿ, ಮೇಲ್ವಿಚಾರಕಿ ಲತಾ, ತಾಲೂಕು ನೋಡೆಲ್ ಅಧಿಕಾರಿ ಜೀವನ್, ಗಿಐಇ ಭಾಗ್ಯಶ್ರೀ, ಶುಷ್ಮಿತಾ, ಬೋಳ್ವಾರ್ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಕಾವ್ಯಶ್ರೀ, ಕಸಬಾ ಕಾರ್ಯಕ್ಷೇತ್ರದ ಪೂಜಾ, ಪುತ್ತೂರು ಕಛೇರಿ ಸಿಬ್ಬಂದಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು. ಸದಸ್ಯರ ATM ಕಾರ್ಡ್ ಮೂಲಕ ಹಣ ವಿತ್ ಡ್ರಾ ಮಾಡಿ ಚಾಲನೆ ನೀಡಲಾಯಿತು.













