ಜು.6: ದರ್ಬೆಯಲ್ಲಿ ಶಾಂತಿ ಫ್ಯಾನ್ಸಿ ಶುಭಾರಂಭ

0

ಪುತ್ತೂರು: ದರ್ಬೆ ಮುಖ್ಯ ರಸ್ತೆಯ ಮೊಯ್ದಿನ್ ಕಾಂಪ್ಲೆಕ್ಸ್ ನಲ್ಲಿ ಶಾಂತಿ ಫ್ಯಾನ್ಸಿ ಮಳಿಗೆಯು ಜು.6 ರಂದು ಶುಭಾರಂಭಗೊಳ್ಳಲಿದೆ.

ಮಳಿಗೆಯ ಮಾಲಕ ವಿನಿಲ್ ಮಸ್ಕರೇನ್ಹಸ್ ರವರ ತಂದೆಯವರಾದ ದಿ.ಎಡ್ವರ್ಡ್ ಮಸ್ಕರೇನ್ಹಸ್ ರವರು ಪುತ್ತೂರು ಮುಖ್ಯ ರಸ್ತೆಯ ಜುಮಾ ಮಸೀದಿಯ ಕಟ್ಟಡದಲ್ಲಿ ಹಲವಾರು ವರ್ಷ ಶಾಂತಿ ಫ್ಯಾನ್ಸಿ ಮಳಿಗೆಯನ್ನು ಮುನ್ನೆಡೆಸಿದ್ದರು. ಈಗ ಅವರ ನೆನಪಿಗಾಗಿ ದರ್ಬೆಯಲ್ಲಿ ಅದೇ ಹೆಸರಿನಲ್ಲಿ ಮಳಿಗೆಯು ಶುಭಾರಂಭಗೊಳ್ಳಲಿದೆ.

ನೂತನ ಮಳಿಗೆಯನ್ನು ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು ವಂ|ಜೆ.ಬಿ ಮೊರಾಸ್ ರವರು ಆಶೀರ್ವಚನ ನೀಡಲಿದ್ದಾರೆ ಜೊತೆಗೆ ವಿವಿಧ ಗಣ್ಯರು ಉಪಸ್ಥಿತಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಳಿಗೆಯ ಮಾಲಕರಾದ ಆಯ್ಯನಿ ವಿನಿಲ್ ಮಸ್ಕರೇನ್ಹಸ್(7259899952) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here