






ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ನೆಲ್ಲಿಕಟ್ಟೆ ರಸ್ತೆಯಲ್ಲಿ ಎರಡು ಬಸ್‌ಗಳು ಏಕಕಾಲದಲ್ಲಿ ಕೆಟ್ಟು ನಿಂತ ಪರಿಣಾಮ ಸ್ವಲ್ಪ ಸಮಯ ವಾಹನ ಸಂಚಾರಕ್ಕೆ ಅಡ್ಡಿಯಾದ ಘಟನೆ ಜು.6ರಂದು ಬೆಳಗ್ಗೆ ನಡೆದಿದೆ.



ಪುತ್ತೂರು ಸಿಟಿ ಆಸ್ಪತ್ರೆ ಮಾರ್ಗದ ನೆಲ್ಲಿಕಟ್ಟೆ ರಸ್ತೆಯ ಇಳಿಜಾರಿನಲ್ಲಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಒಂದು ಕೆಎಸ್‌ಆರ್‌ಟಿಸಿ ಬಸ್ ಕೆಟ್ಟು ನಿಂತಿತ್ತು. ಅದೇ ಸಮಯಕ್ಕೆ ಅದೇ ರಸ್ತೆಯಾಗಿ ಬರುತ್ತಿದ್ದ ಇನ್ನೊಂದು ಬಸ್ ಕೂಡಾ ಕೆಟ್ಟು ನಿಲ್ಲುವಂತಾಯಿತು. ಎರಡೂ ಬಸ್‌ಗಳು ರಸ್ತೆಯ ಮಧ್ಯೆ ನಿಂತಿದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಯಿತು.



ಸ್ಥಳೀಯರ ಸಹಾಯ ಮತ್ತು ಸಂಬಂಧಪಟ್ಟ ಸಿಬ್ಬಂದಿ ಮಧ್ಯಪ್ರವೇಶಿಸಿದರು. ಬಳಿಕ ಒಂದು ಬಸ್ ಅನ್ನು ಅಲ್ಲಿಯೇ ನಿಲ್ಲಿಸಲಾಗಿದ್ದು, ಇನ್ನೊಂದು ಬಸ್ ಅನ್ನು ರಿವರ್ಸ್ ತೆಗೆದುಕೊಂಡು ರಸ್ತೆ ಬದಿಗೆ ನಿಲ್ಲಿಸಲಾಯಿತು. ಇದರಿಂದ ಸಂಚಾರ ಸಹಜ ಸ್ಥಿತಿಗೆ ಮರಳಿತು.










