ಕುಲಾಲ ಸಂಘದ ಕೆಸರು ಗದ್ದೆ ಕ್ರೀಡಾಕೂಟ ಮೂಲ್ಯೆರೆ ಕೆಸರ್ದ ಗೊಬ್ಬು

0

ಪುತ್ತೂರು: ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ಎರಡನೇ ವರ್ಷದ ಕುಲಾಲ ಸಮಾಜ ಬಂಧುಗಳ ಮುಕ್ತ `ಮೂಲ್ಯೆರೆ ಕೆಸರ್ದ ಗೊಬ್ಬು’ ಜು.೫ರಂದು ಬೆದ್ರಾಳ ಶ್ರೀನಂದಿಕೇಶ್ವರ ಭಜನಾ ಮಂದಿರ ಎದುರಿನ ಅಪ್ಪಿ ಮೂಲ್ಯ ಅವರ ಗದ್ದೆಯಲ್ಲಿ ನಡೆಯಿತು.


ಗದ್ದೆಯ ಮ್ಹಾಲಕಿ ಅಪ್ಪಿ ಮೂಲ್ಯ ಅವರು ಗದ್ದೆಗೆ ಎಳನೀರು ಹಾಗೂ ಹಾಲು ಎರೆದು ಕೆಸರು ಗದ್ದೆ ಕ್ರೀಡೆಗಳಿಗೆ ಚಾಲನೆ ನೀಡಿದರು. ನಂತರ ಸಮಾಜ ಬಾಂಧವರಿಗಾಗಿ ವಿವಿಧ ಮನರಂಜನಾತ್ಮಕ ಆಟೋಟ ಸ್ಪರ್ಧೆಗಳು ನೆರವೇರಿತು.


ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಶೇಷಪ್ಪ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಯುವ ಹಿಂದು ಮುಖಂಡ ಯತೀಶ್ ಪೆರುವಾಯಿ, ಸುಳ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆರ್ ದಿವಾಕರ ಕಂಬಾರ, ಸಂಘದ ನಿಕಟ ಪೂರ್ವ ಅಧ್ಯಕ್ಷ ನವೀನ್ ಕುಲಾಲ್, ಕ್ರೀಡಾ ಕಾರ್ಯದರ್ಶಿ ಹರೀಶ್ ಕುಲಾಲ್ ಶೇವಿರೆ ಹಾಗೂ ಗದ್ದೆಯ ಮ್ಹಾಲಕಿ ಅಪ್ಪಿ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಘದ ಕಾರ್ಯದರ್ಶಿ ತೇಜಕುಮಾರ್ ಕುಲಾಲ್ ಸ್ವಾಗತಿಸಿ, ಉಪಾಧ್ಯಕ್ಷ ಸುಧಾಕರ ಕುಲಾಲ್ ನಡುವಾಲ್ ವಂದಿಸಿದರು. ಯತೀಶ್ ಕುಲಾಲ್ ಕೋರ್ಮಂಡ ಕಾರ್ಯಕ್ರಮ ನಿರೂಪಿಸಿದರು.
ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಮನರಂಜನಾತ್ಮಕ ಆಟೋಟ ಸ್ಪರ್ಧೆಗಳ ನಡೆದಿದ್ದು ಸ್ಪರ್ಧೆಯ ಜೊತೆಗೆ ನೋಡುಗರಿಗೆ ಮನರಂಜನೆಯು ನೀಡಿತು. ಅಲ್ಲದೆ ಮಹಿಳೆಯರು ಮತ್ತು ಪುರುಷರಗಾಗಿ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದು ವಿಜೇತರಿಗೆ ಮಹಿಳಾ ವಿಭಾಗದಲ್ಲಿ ಪ್ರಥಮ ರು.೩,೩೩೩, ದ್ವಿತೀಯ ರೂ.೨,೨೨೨, ಪುರುಷರ ವಿಭಾಗದಲ್ಲಿ ಪ್ರಥಮ ರೂ.೫,೫೫೫ ಹಾಗೂ ದ್ವಿತೀಯ ರು.೩,೩೩೩ ನಗದು ಹಾಗೂ ಟ್ರೋಫಿಯನ್ನು ನೀಡಲಾಯಿತು.


ಕುಲಾಲ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಜನಾರ್ಧನ ಬಂಗೇರ ಸಿಟಿಗುಡ್ಡೆ, ಸತೀಶ್ ಕುಲಾಲ್ ಉಡ್ಡಂಗಳ, ಕುಂಬಾರರ ಸಂಘ ಅಲಂಕಾರ್ ಕೊಂಡಾಡಿಕೊಪ್ಪ ಇದರ ಅಧ್ಯಕ್ಷ ಶೀನಪ್ಪ ಕುಂಬಾರ, ಗ್ರಾಮ ಸಮಿತಿಗಳಾದ ಕುಲಾಲ ಸುಧಾರಕ ಸೇವಾ ಸಂಘ ಪಾಣಾಜೆ ಇದರ ಅಧ್ಯಕ್ಷ ವಾಸು ಕುಲಾಲ್, ಕಾರ್ಯದರ್ಶಿ ಸುರೇಶ್ ಕುಲಾಲ್, ಕುಲಾಲ ಸಮಾಜ ಸೇವಾ ಸಂಘ ರಾಮಕುಂಜ ಇದರ ಅಧ್ಯಕ್ಷ ಹರೀಶ್ ಕುಲಾಲ್ ಹೊಸಮಣ್ಣು, ಕುಲಾಲ ಸಮಾಜ ಸೇವಾ ಸಂಘ ಅರಿಯಡ್ಕ ಮಾಡ್ನೂರು ಇದರ ಕಾರ್ಯದರ್ಶಿ ರಾಘವ ಪಿ.ಎಸ್., ಕುಲಾಲ ಸಮಾಜ ಸೇವಾ ಸಂಘ ಸೇಡಿಯಾಪು ಇದರ ಕಾರ್ಯದರ್ಶಿ ಜಯಶ್ರೀ ಕುಲಾಲ್, ಕೊಡಗು ಜಿಲ್ಲಾ ಕುಲಾಲರ ಯಾನೆ ಕುಂಬಾರ ಸಂಘದ ಪದಾಧಿಕಾರಿಗಳು, ಸದಸ್ಯರು ಸಹಿತ ನೂರಾರು ಮಂದಿ ಸಮಾಜ ಬಾಂಧವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here