







ಪುತ್ತೂರು: ಪುತ್ತೂರು ಕೃಷಿ ಇಲಾಖೆಯಲ್ಲಿ ಪಿವಿಸಿ ಪೈಪ್, ಬೇವಿನ ಎಣ್ಣೆ ಹಾಗೂ ಸೆಣಬಿನ ಬೀಜಗಳು ಕೃಷಿಕರಿಗೆ ಸಹಾಯಧನದ ರೂಪದಲ್ಲಿ ಲಭ್ಯವಿದೆ. ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ಶೇ.50 ಸಹಾಯಧನದಲ್ಲಿ ಪಡೆಯಬಹುದು. ತಮ್ಮ ಜಮೀನಿನ ಆರ್ಟಿಸಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಪ.ಜಾತಿ ಪ.ಪಂಗಡದ ರೈತರಾಗಿದ್ದರೆ ಜಾತಿ ಪ್ರಮಾಣಪತ್ರದ ಪ್ರತಿಯೊಂದಿಗೆ ಜು.18ರೊಳಗೆ ಅರ್ಜಿ ಸಲ್ಲಿಸಬಹುದು. ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖಾ ಪ್ರಕಟಣೆ ತಿಳಿಸಿದೆ.












