ಅಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ

0

ಆಲಂಕಾರು: ಲಯನ್ಸ್ ಕ್ಲಬ್ ದುರ್ಗಾಂಬಾ ಆಲಂಕಾರು ಇದರ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಲಯನ್.ಎಂ. ನಿತ್ಯಾನಂದ ಶೆಟ್ಟಿ ಮನವಳಿಕೆ ಕಾರ್ಯದರ್ಶಿಯಾಗಿ ಲಯನ್. ಸುಂದರ ಗೌಡ, ಕೋಶಾಧಿಕಾರಿಯಾಗಿ ಲಯನ್ ಎಂ. ಗಣೇಶ್ ರೈ.ಕೆ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಸಾಂಸ್ಕೃತಿಕ ಸಮಿತಿ ಸoಯೋಜಕರು ಲಯನ್ ಸ್ವರೂಪ ಶೆಟ್ಟಿ ಬೆಳ್ಳಿಪ್ಪಾಡಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಪ್ರಮಾಣವಚನ ಬೋಧಿಸಿ, ಶುಭಹಾರೈಸಿದರು. ಜಿಲ್ಲಾ ಸಂಪುಟ ರಾಯಭಾರಿ ಲಯನ್ ಕಾವು ಹೇಮನಾಥ ಶೆಟ್ಟಿ, ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಸ್ಥಾಪಕಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ, ವಲಯ ಅಧ್ಯಕ್ಷ ಲಯನ್ ಜಗನ್ನಾಥ ರೈ ಗುತ್ತು, ಪ್ರಾಂತೀಯ ಅಧ್ಯಕ್ಷ ಲಯನ್ ಆನಂದ ರೈ, ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ನ ಕಾರ್ಯವೈಖರಿಯ ಬಗ್ಗೆ ತಿಳಿಸಿ ಶುಭಹಾರೈಸಿದರು.


ನೂತನ ಅಧ್ಯಕ್ಷ ಎಂ. ನಿತ್ಯಾನಂದ ಶೆಟ್ಟಿ ಪದಸ್ವೀಕರ ಮಾಡಿದ ನಂತರ ಮಾತನಾಡಿ, ಆಲಂಕಾರು ದುರ್ಗಾಂಬಾ ಲಯನ್ಸ್ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಮಾಡಲು ಎಲ್ಲಾರು ಸಹಕರಿಸುವಂತೆ ವಿನಂತಿಸಿದರು.

ನಿಕಟ ಪೂರ್ವ ಅಧ್ಯಕ್ಷ ಪದ್ಮಪ್ಪ ಗೌಡ ಸ್ವಾಗತಿಸಿ, ತಮ್ಮ ಅಧಿಕಾರಾವಧಿಯಲ್ಲಿ ಸಹಕಾರ ನೀಡಿದ ಎಲ್ಲಾರಿಗೂ ಕೃತಜ್ಞತೆ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಉದಯ ಸಾಲಿಯಾನ್ ರವರನ್ನು ಕ್ಲಬ್‌ನ ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು. ಸಮಾಜ ಸೇವೆಗಾಗಿ ಡಾ. ಹೇಮಂತ್ ರೈ ಮನವಳಿಕೆಗುತ್ತು ರವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.


ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಆರ್ಥಿಕ ನೆರವು ನೀಡಲಾಯಿತು. ನಂತರ ನಿಕಟಪೂರ್ವ ಅಧ್ಯಕ್ಷ ಲ.ಪದ್ಮಪ್ಪ ಗೌಡ, ಕಾರ್ಯದರ್ಶಿ ಲ. ಲಿಂಗಪ್ಪ ಪೂಜಾರಿ ಹಾಗೂ ಕೋಶಾಧಿಕಾರಿ ಲ. ಇಂದುಶೇಖರ ಶೆಟ್ಟಿ, ಲಯನ್ಸ್ ಜಿಲ್ಲಾ ದ್ವಿತಸ ಲ. ವೆಂಕಟೇಶ ಹೆಬ್ಬಾರ್ ದಂಪತಿಗಳನ್ನು ಸಭೆಯಲ್ಲಿ ಗೌರವಿಸಲಾಯಿತು.ಲ.ಆರುವಾರಸುಭಾಸ್ ಕುಮಾರ್ ಶೆಟ್ಟಿ ಪ್ರಾರ್ಥಿಸಿ, ಮಾಜಿ ಅಧ್ಯಕ್ಷ ಲ. ಪ್ರಶಾಂತ ರೈ ಮನವಳಿಕೆ, ಉಪನ್ಯಾಸಕ ಲ. ವಿಶ್ವನಾಥ ಶೆಟ್ಟಿ ,ಲ. ಮೋಹನದಾಸ ರೈ ಅತಿಥಿಗಳನ್ನು ಪರಿಚಯಿಸಿ. ಲ. ಲಕ್ಷ್ಮೀನಾರಾಯಣ ಪ್ರಭು ಸನ್ಮಾನ ಪತ್ರ ವಾಚಿಸಿ ಲ.ಕಿರಣ್ ಪಜ್ಜಡ್ಕ ಕಾರ್ಯಕ್ರಮ ನಿರೂಪಿಸಿ, ಲ. ಶ್ರೀಪತಿ ರಾವ್ ವಂದಿಸಿದರು. ರಾಷ್ಟ್ರ ಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here