






ಪುತ್ತೂರು: ಕೊಳ್ತಿಗೆ ವರ್ತಕರ ಸಂಘದ ಸಭೆಯು ಸಂಘದ ಅಧ್ಯಕ್ಷರಾದ ಹರಿಪ್ರಸಾದ್ ಕುಂಟಿಕಾನ ಅವರ ಅಧ್ಯಕ್ಷತೆಯಲ್ಲಿ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆಯಿತು.



ಸಭೆಯಲ್ಲಿ ಹಿಂದೆ ನಡೆದ ಸಂಘದ ಕಾರ್ಯಕಲಾಪಗಳು, ನಿರ್ಣಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಜೆಸಿಐ ಬೆಳ್ಳಾರೆಯ ಅಧ್ಯಕ್ಷರಾಗಿ ಆಯ್ಕೆಯಾದ ಪೂರ್ಣಿಮಾ ಪೆರ್ಲಂಪಾಡಿ ಅವರನ್ನು ಸನ್ಮಾನಿಸಲಾಯಿತು.



ಜೆಸಿಐ ಬೆಳ್ಳಾರೆ ಇದರ ಆಶ್ರಯದಲ್ಲಿ ‘ವರ್ತಕರ ವಿಕಾಸ ‘ ಮಾಹಿತಿ ಕಾರ್ಯಾಗಾರ ನಡೆಯಿತು. ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟ ಜೆಸಿಐ ವಲಯ ತರಬೇತುದಾರರಾದ ಜೆಎಫ್‌ಎಂ ಸೋಮಶೇಖರ ನೇರಳ ಮಾತನಾಡಿ,ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಬ್ಬ ಯಶಸ್ವಿ ವರ್ತಕ ಹೇಗಿರಬೇಕು, ಯಾವ ರೀತಿ ಇದ್ದರೆ ಆತ ಆತನ ವೃತ್ತಿಯಲ್ಲಿ ಯಶಸ್ಸು ಕಾಣಬಹುದು, ವೃತ್ತಿ ನಿಷ್ಠೆ, ವೃತ್ತಿಧರ್ಮ ಪಾಲಿಸಿದರೆ ಜೀವನದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆಯಬಹುದು ಎಂಬ ಬಗ್ಗೆ ವಿವರಿಸಿದರು.
ಜೆಸಿಐ ಬೆಳ್ಳಾರೆಯ ಅಧ್ಯಕ್ಷೆ ಪೂರ್ಣಿಮಾ ಪೆರ್ಲಂಪಾಡಿ, ಜೆಸಿಐ ವಲಯ -15ರ ವಲಯಾಧಿಕಾರಿ ಜಗದೀಶ್ ರೈ ಪೆರುವಾಜೆ, ಜೆಸಿಐ ಬೆಳ್ಳಾರೆಯ ಸದಸ್ಯೆ ಅನುಷಾ ಪೆರ್ಲಂಪಾಡಿ ಉಪಸ್ಥಿತರಿದ್ದರು. ರೋಹಿಣಿ ಪ್ರಾರ್ಥಿಸಿದರು. ಪ್ರವೀಣ್ ಜಿ. ಕೆ ಸ್ವಾಗತಿಸಿದರು. ಸಂಘದ ವರದಿಯನ್ನು ಮೋಹನ್ ಆಳ್ವ, ಸನ್ಮಾನಿತರ ಪರಿಚಯವನ್ನು ವೆಂಕಟ್ರಮಣ ಪಿ, ವಾಚಿಸಿದರು. ಪುರುಷೋತ್ತಮ್ ಎನ್ ಬಾಯಂಬಾಡಿ ವಂದಿಸಿದರು. ಪ್ರಭಾಕರ ರೈ ಕೊರಂಬಡ್ಕ ಕಾರ್ಯಕ್ರಮದ ನಿರೂಪಿಸಿದರು.










