ಪಡುವನ್ನೂರು : ಮನೆಯ ಮೇಲೆ ಬಿದ್ದ ಮರ

0

ಬಡಗನ್ನೂರು : ಬಡಗನ್ನೂರು ಗ್ರಾ. ಪಂ ವ್ಯಾಪ್ತಿಯ ಪಡುವನ್ನೂರು ಗ್ರಾಮದ ಕುದ್ಕಾಡಿ ರವೀಂದ್ರ ರೖೆ ರವರ ಮನೆಯ ಮೇಲೆ ಜು.7 ರಂದು ಸುರಿದ ಭಾರಿ ಮಳೆ ಗಾಳಿಗೆ ದೊಡ್ಡ ಗಾತ್ರದ ಬೀಟೆ ಮರವೊಂದು ಬುಡ ಸಮೇತ ಮುರಿದು ಬಿದ್ದು ಹಾನಿಯುಂಟಾಗಿ ಅಪಾರ ಕಷ್ಟ ನಷ್ಟ ಉಂಟಾಗಿದೆ.

ಮನೆಯ ಮೇಲ್ಚಾವಣಿ ಸಂಪೂರ್ಣ ಜಖಂ ಗೊಂಡಿದ್ದು ಮನೆಯೊಳಗಿದ್ದ ಪಾತ್ರೆ, ಸಾಮಾನು ಹಾಗೂ ಇತರ ವಸ್ತುಗಳಿಗೆ ಹಾನಿಯಾಗಿ ಸುಮಾರು ರೂ 2.ಲಕ್ಷ ಸಂಭವಿಸಿದೆ.


ಘಟನೆ ಸಂಭವಿಸಿದ ಸ್ಥಳಕ್ಕೆ ಪಡುವನ್ನೂರು ಗ್ರಾಮದ ಗ್ರಾಮಾಡಳಿತಾಧಿಕಾರಿಗಳು, ಅರಣ್ಯ ಪಾಲಕರು ಹಾಗೂ ಸ್ಥಳೀಯ ಗ್ರಾ. ಪಂ ನಿಕಟಪೂರ್ವ ಪಂಚಾಯತ್ ಸದಸ್ಯ ಪುರಂದರ ರೖೆ ಕುದ್ಕಾಡಿ, ರವಿರಾಜ್ ರೖೆ ಸಜಂಕಾಡಿ, ಹಾಗೂ ಪಕ್ಷದ ಪ್ರಮುಖರಾದ ರಾಕೇಶ್ ರೖೆ ಕುದ್ಕಾಡಿ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here