







ಪುತ್ತೂರು: ಭೂ ನ್ಯಾಯ ಮಂಡಳಿಯ ಕೋರ್ಟ್ ಕಲಾಪದ ವೇಳೆ ಹೃದಯಾಘಾತದಿಂದ ನಿಧನರಾದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಭೂ ನ್ಯಾಯ ಮಂಡಳಿಯ ಸದಸ್ಯರು , ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರು ಹಾಗೂ ಕಂಬಳ ಸಮಿತಿಯ ಉದ್ಘೋಷಕರಾಗಿದ್ದ ಕೋಡಿಂಬಾಡಿ ನಿವಾಸಿ ನಿರಂಜನ ರೈ ಮಠಂತಬೆಟ್ಟು ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಗಳು ಜು.9ರಂದು ಕೋಡಿಂಬಾಡಿಯಲ್ಲಿರುವ ಅವರ ಅನಂತಕೃಪಾ ನಿವಾಸದಲ್ಲಿ ಬಂಟ ಸಮಾಜದ ಸಂಪ್ರದಾಯದಂತೆ ನಡೆಯಿತು.


ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧೀಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ತಹಶೀಲ್ದಾರ್ ಎಸ್.ಬಿ ಕೂಡಲಗಿ, ಉಪ ತಹಶೀಲ್ದಾರ್ ನಾಗೇಂದ್ರ, ಪೂಡಾ ಸದಸ್ಯ ನಿಹಾಲ್ ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ, ಸುಮ ಅಶೋಕ್ ರೈ, ನ್ಯಾಯವಾದಿ ಗಿರೀಶ್ ಮಳಿ, ಕಂಬಳ ಕೋಣಗಳ ಮ್ಹಾಲಕ ಎರ್ಮಾಲ್ ರೋಹಿತ್ ಹೆಗ್ಡೆ, ಉದ್ಯಮಿ ವಿಜಯ ಕುಮಾರ್ ಸೊರಕೆ, ವಿಕ್ರಂ ರೈ ಸಾಂತ್ಯ, ರಾಮದಾಸ ಹಾರಾಡಿ, ವೆಂಕಟರಮಣ ಕಳುವಾಜೆ, ಜೈರಾಜ್ ಭಂಡಾರಿ, ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೋಂಡಾ, ಪ್ರೋ.ಕಬಡ್ಡಿ ತರಬೇತುದಾರ ಪ್ರಶಾಂತ್ ರೈ ಕೈಕಾರ, ನ್ಯಾಯವಾದಿ ಕುಮಾರನಾಥ, ಪಿ.ಜಿ ಚಂದ್ರಶೇಖರ ರಾವ್, ಕೈಪ ಕೇಶವ ಭಂಡಾರಿ, ಜಯಪ್ರಕಾಶ್ ಬದಿನಾರು, ಚಂದ್ರಶೇಖರ ಆಳ್ವ, ಕಿಟ್ಟಣ್ಣ ಗೌಡ, ಅಮರನಾಥ ಬಪ್ಪಳಿಗೆ, ಉಲ್ಲಾಸ್ ಕೋಟ್ಯಾನ್ ಸಹಿತ ನೂರಾರು ಮಂದಿ ಆಗಮಿಸಿ, ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.













