ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕ ದೇರ್ಲ ಕೊರಗಪ್ಪ ರೈ(ಡಿ.ಕೆ.ರೈ)ಯವರ ಉತ್ತರಕ್ರಿಯೆ- ನುಡಿನಮನ

0

ಪುತ್ತೂರು: ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕ ದೇರ್ಲ ಕೊರಗಪ್ಪ ರೈ(ಡಿ.ಕೆ.ರೈ)ಯವರ ಉತ್ತರಕ್ರಿಯೆ- ನುಡಿನಮನ ಕಾರ್‍ಯಕ್ರಮ ಜು.9ರಂದು ಪುತ್ತೂರಿನ ಸ್ವಾಮಿ ಕಲಾಮಂದಿರದಲ್ಲಿ ಜರಗಿತು.

ಸಮಾಜಕ್ಕೆ ಒಳ್ಳೆಯ ಹೆಸರನ್ನು ತಂದಿದ್ದಾರೆ- ಡಾ.ನರೇಂದ್ರ ರೈ ದೇರ್ಲ
ಲೇಖಕ ಡಾ, ನರೇಂದ್ರ ರೈ ದೇರ್ಲ ಅವರು ಮಾತನಾಡಿ ದೇರ್ಲ ಕೋರಗಪ್ಪ ರೈ ಅವರು ಉತ್ತಮ ಕ್ರೀಡಾಪಟುವಾಗಿ, ಬ್ಯಾಂಕಿಗೆ ಮತ್ತು ಸಮಾಜಕ್ಕೆ ಒಳ್ಳೆಯ ಹೆಸರನ್ನು ತಂದಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿ ಉತ್ತಮವಾದ ಸೇವೆಯನ್ನು ಸಲ್ಲಿಸುವ ಮೂಲಕ ಹೆಸರನ್ನು ಪಡೆದಿದ್ದರು. ಕೊರಗಪ್ಪ ರೈ ಅವರು ಕುಟುಂಬ ಮತ್ತು ಬಂಧು ಬಳಗದೊಂದಿಗೆ ತುಂಬಾ ಅನ್ಯೂನತೆಯಿಂದ ಬೆರೆತು ಬಾಳುತ್ತಿದ್ದರು ಎಂದು ನುಡಿನಮನ ಸಲ್ಲಿಸಿದರು.

ಬದುಕು ಸಮಾಜಕ್ಕೆ ಮಾದರಿಯಾಗಿದೆ- ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ
ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿ ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ ಅವರು ಮಾತನಾಡಿ ತನ್ನ ಸಂಸಾರ ಮತ್ತು ಕುಟುಂಬದವರನ್ನು ಅಕ್ಕರೆಯಿಂದ ಕಾಣುತ್ತಿದ್ದ ಕೊರಗಪ್ಪ ರೈ ಬದುಕು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ದೇರ್ಲ ಕೊರಗಪ್ಪ ರೈ ಅವರ ಭಾವ ಬಾಲಕೃಷ್ಣ ಶೆಟ್ಟಿ ಪುತ್ತಿಗೆ ಅವರು ಸಂದಭೋಚಿತವಾಗಿ ಮಾತನಾಡಿದರು.
ದೇರ್ಲ ಕೊರಗಪ್ಪ ರೈ ಅವರ ತಾಯಿ ಲಕ್ಷ್ಮಿ ಕೆ.ರೈ, ಪತ್ನಿ ಅಮೃತ ರೈ, ಮಕ್ಕಳಾದ ಕಾರ್ತಿಕ್ ರೈ, ಆದರ್ಶ್ ರೈ, ಸೊಸೆಯಂದಿರು, ಮೊಮ್ಮಕ್ಕಳು, ಸಹೋದರ, ಸಹೋದರಿಯರು, ದೇರ್ಲ, ಪುತ್ತಿಗೆಗುತ್ತು ಹಾಗೂ ಚಿಲ್ಮೆತ್ತಾರು ಕುಟುಂಬಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳು, ಸಾಮಾಜಿಕ, ರಾಜಕೀಯ ಮುಖಂಡರುಗಳು ಸೇರಿದಂತೆ ಊರ-ಪರವೂರ ಹಿತೈಷಿಗಳು, ಬಂಧುಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here