







ವಿಟ್ಲ: ಲಿಷಾ ಕಂಪನಿಯ ವಿವಿಧ ಎಲೆಕ್ಟ್ರಿಕಲ್ ಉತ್ಪನ್ನಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರವು ಜು.9ರಂದು ಸುಷಾ ಚೇಂಬರ್ಸ್ನಲ್ಲಿರುವ ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಯಶಸ್ವಿಯಾಗಿ ನಡೆಯಿತು.



ಟೆಕ್ನಿಷಿಯನ್ಗಳಿಗೆ ಲಿಷಾ ಕಂಪನಿಯ ಉತ್ಪನ್ನಗಳ ಕುರಿತು ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಗಾರದಲ್ಲಿ ಕಂಪನಿಯ ಮಂಗಳೂರು ವಿಭಾಗದ ಎಎಸ್ಎಂ ಶ್ರೀಪತಿ ಮಯ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಸುಮಾರು 40 ನಿಮಿಷಗಳ ಕಾಲ ಟೆಕ್ನಿಷಿಯನ್ಗಳೊಂದಿಗೆ ಸಂವಾದ ನಡೆಸಿದ ಅವರು, ಲಿಷಾ ಉತ್ಪನ್ನಗಳ ವೈಶಿಷ್ಟ್ಯಗಳು, ಬಳಕೆ, ಗುಣಮಟ್ಟ, ಅನುಕೂಲಗಳು ಹಾಗೂ ಮಿತಿಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಅಲ್ಲದೆ, ಟೆಕ್ನಿಷಿಯನ್ಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ನೀಡಿ ಅವರ ಸಂದೇಹಗಳನ್ನು ನಿವಾರಿಸಿದರು.



ಕಾರ್ಯಕ್ರಮದ ಆರಂಭದಲ್ಲಿ ಮೈತ್ರಿ ಎಲೆಕ್ಟ್ರಿಕ್ ಕಂಪನಿಯ ಮಾಲಕ ರವಿನಾರಾಯಣ ಎಂ ಅವರು ಎಲ್ಲರನ್ನು ಸ್ವಾಗತಿಸಿ, ಸಂಸ್ಥೆಗೆ ನಿರಂತರ ಸಹಕಾರ ನೀಡುವಂತೆ ಮನವಿ ಮಾಡಿದರು.
ಸಂಸ್ಥೆಯ ಮ್ಯಾನೇಜರ್ ಉರ್ಬನ್ ಡಿ’ಸೋಜ ಅವರು ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಟೆಕ್ನಿಷಿಯನ್ಗಳಿಗೆ ಉಪಹಾರ ಹಾಗೂ ಸಣ್ಣ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು.









