







ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 20 ಅಂಶಗಳ ಮಾಸಿಕ ಸಭೆಯಲ್ಲಿ ಸಹಕಾರಿ ಇಲಾಖೆಯಲ್ಲಿ 26 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾಗಿ ಪದೋನ್ನತಿ ಹೊಂದಿದ ಶೋಭ ಎನ್.ಎಸ್ ರವರಿಗೆ ರವರಿಗೆ ಸನ್ಮಾನ ಕಾರ್ಯಕ್ರಮ ಪುತ್ತೂರಿನ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.



ಸಭಾದ್ಯಕ್ಷತೆಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರು, ಜಿಲ್ಲಾ ಸಹಕಾರಿ ಯೂನಿಯನ್ ಇದರ ಅದ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ವಹಿಸಿಕೊಂಡು ಸಹಕಾರ ಇಲಾಖೆಯ ಶಿಸ್ತಿನ ಅದಿಕಾರಿಯಾಗಿ ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಂಧಕರ ಕಚೇರಿಯಲ್ಲಿ ಸಿಡಿಒ ಆಗಿ ಕರ್ತವ್ಯ ನಿರ್ವಹಿಸಿ ಇದೀಗ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾಗಿ ಪದೋನ್ನತಿ ಹೊಂದಿದ ಶೋಭ ರವರ ಕಾರ್ಯ ವೈಖರಿ ಬಗ್ಗೆ ಶ್ಲಾಘಿಸಿ, ಉತ್ತಮ ಅಧಿಕಾರಿಗಳನ್ನು ಸಹಕಾರ ಇಲಾಖೆಯಲ್ಲಿಯೆ ಉಳಿಸಿ ಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.



ಮುಖ್ಯ ಅತಿಥಿಯಾದ ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ , ಸಹಕಾರರತ್ನ ಸವಣೂರು ಕೆ. ಸೀತಾರಾಮ ರೈ ಮಾತನಾಡಿ ಶೋಭ ರವರನ್ನು ಸುಮಾರು 20 ವರ್ಷಗಳಿಂದ ಗಮನಿಸುತ್ತಿದ್ದು ಎಲ್ಲಾ ಸಹಕಾರಿಗಳು ಮೆಚ್ಚುವ ರೀತಿಯಲ್ಲಿ ಕರ್ತವ್ಯ ಪ್ರಜ್ಞೆಯೊಂದಿಗೆ ಕಾರ್ಯ ನಿರ್ವಹಿಸಿದ್ದು ಇದೀಗ ಪದೋನ್ನತಿ ಹೊಂದಿದ್ದಾರೆ. ಅವರಿಗೆ ಅಬಿನಂದನೆ ಸಲ್ಲಿಸಿ ಶುಭಹಾರೈಸಿದರು. ಮುಖ್ಯ ಅತಿಥಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಎಸ್.ಎಂ ರಘು ಮಾತನಾಡಿ ಕಚೇರಿಯಲ್ಲಿ ನಾನಿಲ್ಲದ ಸಮಯದಲ್ಲಿ ಯಾವುದೇ ಕಡತಗಳನ್ನು ಬಾಕಿ ಉಳಿಸಿಕೊಳ್ಳದೆ ಕಚೇರಿ ಕೆಲಸಗಳನ್ನು ಸುಸೂತ್ರವಾಗಿ ನಡೆಸಿಕೊಳ್ಳುತ್ತಿದ್ದರು ಎಂದು ಹೇಳಿ ಶುಭಹಾರೈಸಿದರು ಸಭಾಧ್ಯಕ್ಷರು ಅತಿಥಿಗಳೊಂದಿಗೆ ಶೋಭ ರವರಿಗೆ ಶಾಲು ಹೊದಿಸಿ ಹಾರ ಫಲಪುಷ್ಪಗಳೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಶೋಭಾ ರವರು ತನ್ನ ಸೇವಾವಧಿಯಲ್ಲಿ ಮಾರ್ಗದರ್ಶನ ನೀಡಿದ ಎಲ್ಲಾ ಎ.ಆರ್, ಡಿ.ಆರ್ ಮತ್ತು ಜೆ.ಆರ್ ಗಳನ್ನು ಸ್ಮರಿಸಿಕೊಂಡು, ಸಹಕರಿಸಿದ ಡಿಸಿಸಿ ಬ್ಯಾಂಕ್ ಸುಪರ್ವೈಸರುಗಳಿಗೆ ಎಲ್ಲಾ ಸಹಕಾರ ಸಂಘದ ಸಿಇಓ ಗಳಿಗೆ ಕೃತಜ್ಷತೆ ಸಲ್ಲಿಸಿದರು. ಮುಖ್ಯ ಅತಿಥಿಯಾಗಿ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಹರೀಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.
ಎಲ್ಲಾ ಪ್ಯಾಕ್ಸ್ ಗಳ ಸಿಇಓ ಗಳ ಪರವಾಗಿ ಮುಂಡೂರು ಪ್ಯಾಕ್ಸ್ ಸಿಇಓ ಜಯಪ್ರಕಾಶ್ ರೈ ಶುಭ ಹಾರೈಸಿದರು.
ಸಮಾರಂಭದಲ್ಲಿ ವಲಯ ಮೇಲ್ವಿಚಾರಕರಾದ ವಸಂತ ಎಸ್ , ಶರತ್ ಡಿ, ಪ್ರದೀಪ್ ಕೆ, ಮನೋಜ್ ಎಂ ಹಾಗೂ ಪುತ್ತೂರು ಮತ್ತು ಕಡಬ ತಾಲೂಕಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ, ನರಿಮೊಗರು ಸಹಕಾರ ಸಂಘದ ಮಧುಕರ್ ಸಿ.ಎಚ್, ನೆಲ್ಯಾಡಿಯ ದಯಾಕರ್ ರೈ, ಚಾರ್ವಕದ ಅಶೋಕ್ ಗೌಡ, ಆರ್ಯಾಪು ಸಂಘದ ಅಜಿತ್ ರೈ , ಕೊಳ್ತಿಗೆಯ ಬಾಲಗಂಗಾಧರ ಗೌಡ, ಪಾಣಾಜೆಯ ಹರೀಶ್ ಕುಮಾರ್ , ಕಾವು ಸಹಕಾರ ಸಂಘದ ಸಿಇಓ ಕೇಶವ ಮೂರ್ತಿ, ಕುಂಬ್ರದ ಭವಾನಿ ಬಿ.ಆರ್, ಬನ್ನೂರಿನ ರಾಧ ರೈ , ಉಪ್ಪಿನಂಗಡಿಯ ಶೋಭ , ಹೊಸಮಠದ ಸೋಮಸುಂದರ್ ಶೆಟ್ಟಿ, ಕೆದಂಬಾಡಿಯ ವಿನಯಕುಮಾರ್ ರೈ , ಬಿಳಿನೆಲೆಯ ರಂಜಿತ್, ಕಡಬದ ಬಾಲಕೃಷ್ಣ, ಎಡಮಂಗಲದ ರಮೇಶ್ ಬಿ ಏನೆಕಲ್ಲಿನ ರತನ್, ಸುಬ್ರಹ್ಮಣ್ಯದ ಪ್ರಕಾಶ್, ಆಲಂಕಾರಿನ ಮನೋಹರ್ ಪ್ರಕಾಶ್, ಬಲ್ನಾಡಿನ ಕೀರ್ತನ್ ಶೆಟ್ಟಿ ಉಪಸ್ಥಿತರಿದ್ದರು.
ಸವಣೂರು ಸಹಕಾರ ಸಂಘದ ಸಿಇಓ ಚಂದ್ರಶೇಖರ್ ಪಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಇರ್ದೆ-ಬೆಟ್ಟಂಪಾಡಿ ಸಹಕಾರಿ ಸಂಘದ ಸಿಇಓ ರಾಮಯ್ಯ ರೈ ವಂದಿಸಿದರು.










