ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ ಚಿತ್ರ ಕಲಾವಿದೆ ಪೂಜಾ ಬೋರ್ಕರ್

0

ಪುತ್ತೂರು:ಕೊಳ್ತಿಗೆ ಗ್ರಾಮ, ಪೆರ್ಲಂಪಾಡಿ, ಆನಡ್ಕ ನಿವಾಸಿ ಚಿತ್ರ ಕಲಾವಿದೆ ಪೂಜಾ ಬೋರ್ಕರ್ ರವರು ಇದೀಗ ಮತ್ತೊಂದು ವಿಶೇಷ ಕಲಾ ಸಾಧನೆಯ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಕೇವಲ 3 ನಿಮಿಷ 30 ಸೆಕೆಂಡ್ ನಲ್ಲಿ 1.4 ಸೆಂಟಿ ಮೀಟರ್ ಕಥಕಳಿ ಚಿತ್ರವನ್ನು ಕಡಲೆಕಾಳಿನಲ್ಲಿ ಬಿಡಿಸುವುದರೊಂದಿಗೆ ದಾಖಲೆ ನಿರ್ಮಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಪಟ್ಟಿಯನ್ನು ಸೇರಿದ್ದಾರೆ. ಈಗಾಗಲೇ “IBR achiever” ಪಟ್ಟಿಯನ್ನು ಸೇರಿರುವ ಹಾಗೂ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಈಕೆ ಬೆಟ್ಟಂಪಾಡಿ ದಿ|ರಮೇಶ್ ನಾಯಕ್ ಹಾಗೂ ಹೇಮಲತಾ ದಂಪತಿಯ ಪುತ್ರಿ, ಆನಡ್ಕ ಮನೋಜ್ ರವರ ಪತ್ನಿ.

LEAVE A REPLY

Please enter your comment!
Please enter your name here