ಜು.12: ಹನುಮಗಿರಿ ಕ್ಷೇತ್ರದಲ್ಲಿ ಕ್ಷೀರಾಭಿಷೇಕ

0

ಪುತ್ತೂರು: ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಜು.12ರಂದು ಶ್ರೀ ಕೋದಂಡರಾಮ ಮತ್ತು ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಗೆ 1000 ಲೀಟರ್ ಕ್ಷೀರಾಭಿಷೇಕ ನಡೆಯಲಿದೆ.

ಬೆಂಗಳೂರಿನ ಉದ್ಯಮಿ ಬಾಲಕೃಷ್ಣ ಅವರ ಸೇವಾರ್ಥವಾಗಿ ನಡೆಯುವ ಈ ಸೇವೆಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ನೇತೃತ್ವ ವಹಿಸಲಿದ್ದಾರೆ.

ಜು.12ರಂದು ಬೆಳಗ್ಗೆ 6.00 ರಿಂದ ಸದಾನಂದ ಶಾಸ್ತ್ರಿಗಳಿಂದ ಸುಪ್ರಭಾತ ನಡೆಯಲಿದೆ. ಬೆಳಗ್ಗೆ 9.00 ರಿಂದ 12.30 ರವರೆಗೆ ಶ್ರೀ ಕೋದಂಡರಾಮ ಸ್ವಾಮಿಗೆ 1000 ಲೀಟರ್ ಕ್ಷೀರಾಭಿಷೇಕ, ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

ಬೆಳಗ್ಗೆ 10.30 ರಿಂದ 300 ಭಜಕರಿಂದ ಸಾಮೂಹಿಕ ಭಜನೆ ಹಾಗೂ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಗೆ 1000 ಲೀಟರ್ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಸೇವೆಯಲ್ಲಿ ಭಾಗಿಯಾಗುವಂತೆ ಕ್ಷೇತ್ರದ ಆಡಳಿತ ಮಂಡಳಿ ವಿನಂತಿಸಿದೆ. ಹೆಚ್ಚಿನ ಮಾಹಿತಿಗಾಗಿ 8105554644, 7483149413 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here