ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ನ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ

0


ಪುತ್ತೂರು : ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಇದರ ಪ್ರಾಯೋಜಕತ್ವದಲ್ಲಿರುವ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಇದರ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಜು 9 ರಂದು ನೆಲ್ಲಿಕಟ್ಟೆಯಲ್ಲಿರುವ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಒಕ್ಕಲಿಗ ಸ್ವ-ಸಹಾಯ ಸೌಧದಲ್ಲಿ ನಡೆಯಿತು.


ಸಮುದಾಯದ ಕಟ್ಟಕಡೆಯ ವ್ಯಕ್ತಿಯನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುವುದು ಸ್ವ ಸಹಾಯ ಸಂಘದ ಗುರಿ- ಸಂಜೀವ ಮಠಂದೂರು
ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷರಾದ ಸಂಜೀವ ಮಠಂದೂರು ಸುಮಾರು 12 ವರ್ಷಗಳ ಹಿಂದೆ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶದಿಂದ ಆರಂಭಿಸಿದ ಒಕ್ಕಲಿಗ ಸ್ವ ಸಹಾಯ ಸ್ವ ಸಹಾಯ ಟ್ರಸ್ಟ್ ಗ್ರಾಮ ಗ್ರಾಮಕ್ಕೆ ತೆರಳಿ ಗ್ರಾಮ ಮಟ್ಟದಲ್ಲಿ ಸ್ವ ಸಹಾಯ ಸಂಘಗಳನ್ನು ರಚಿಸಿ ಉಳಿತಾಯ ಮಾಡಿಕೊಂಡು, ಸಾಲಗಳನ್ನು ಪಡೆದುಕೊಂಡು ಸುಮಾರು ಸಾವಿರಕ್ಕೂ ಮಿಕ್ಕಿ ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು, ಸ್ವ ಸಹಾಯ ಸಂಘಗಳ ಮೂಲಕ ಸ್ವಾವಲಂಬಿ ಜೀವನದ ಜೊತೆಗೆ ಸಮುದಾಯದ ಕಟ್ಟಕಡೆಯ ವ್ಯಕ್ತಿಯನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠಗೊಳಿಸುವುದು ಸ್ವ ಸಹಾಯ ಸಂಘದ ಗುರಿಯಾಗಿದೆ ಎಂದರು ಹಾಗೂ ನೂತನವಾಗಿ ಟ್ರಸ್ಟಿನ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.


ಸ್ವ ಸಹಾಯ ಸಂಘಗಳ ಮೂಲಕ ಸಮುದಾಯದ ಸಂಘಟನೆ -ಚಿದಾನಂದ ಬೈಲಾಡಿ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಸ್ವ ಸಹಾಯ ಸಂಘಗಳು ಗ್ರಾಮ ಮಟ್ಟದಲ್ಲಿ ಸ್ವ ಸಹಾಯ ಸಂಘಗಳ ಒಕ್ಕೂಟಗಳನ್ನು ರಚಿಸಿಕೊಂಡು ಗ್ರಾಮಗಳಲ್ಲಿ ಆಟಿ ಕೂಟ,ಗ್ರಾಮೊತ್ಸವ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮ ಮಟ್ಟದಲ್ಲಿ ಸಮುದಾಯವನ್ನು ಸಂಘಟಿಸುವುದರ ಜೊತೆಗೆ ತಾಲೂಕು ಮಟ್ಟದಲ್ಲೂ ಸಮುದಾಯದ ಸಂಘಟನೆಗೆ ಮಹತ್ತರವಾದ ಕೊಡುಗೆ ನೀಡಿದೆ, ನೂತನ ಪದಾಧಿಕಾರಿಗಳ ಮೂಲಕ ಟ್ರಸ್ಟ್ ಇನ್ನಷ್ಟು ಪ್ರಗತಿ ಹೊಂದಲಿ ಎಂದು ಶುಭ ಹಾರೈಸಿದರು.


ತನ್ನ ಅವಧಿಯಲ್ಲಿ ಸ್ವ ಸಹಾಯ ಟ್ರಸ್ಟ್ ನ ಯಶಸ್ವಿ ಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ -ಡಿ ವಿ ಮನೋಹರ್
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ನಿರ್ಗಮಿತ ಅಧ್ಯಕ್ಷರಾದ ಡಿ ವಿ ಮನೋಹರ್ ಮಾತನಾಡಿ ಸುಮಾರು 7 ವರ್ಷಗಳ ಕಾಲ ಟ್ರಸ್ಟ್ ನ್ನು ಯಶಸ್ವಿಯಾಗಿ ಮುನ್ನಡೆಸಿದ್ದು, ಈ ಅವಧಿಯಲ್ಲಿ ಟ್ರಸ್ಟ್ ಹತ್ತು ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮವನ್ನು ಕೂಡ ಎಲ್ಲಾರ ಸಹಕಾರದಿಂದ ಮಾದರಿ ಕಾರ್ಯಕ್ರಮವಾಗಿ ಅತ್ಯಂತ ಸಂಭ್ರಮವಾಗಿ ನಡೆಸಿದ್ದೇವೆ.ಎಲ್ಲಾ ರೀತಿಯಲ್ಲೂ ಟ್ರಸ್ಟ್ ನ ಅಭಿವೃದ್ಧಿಗೆ ಸಹಕರಿಸಿದ ಟ್ರಸ್ಟ್ ನ ನಿರ್ದೇಶಕರಿಗೂ,ಸಲಹಾ ಸಮಿತಿ ಸದಸ್ಯರಿಗೂ, ಕೇಂದ್ರ ಒಕ್ಕೂಟ ಅಧ್ಯಕ್ಷರಿಗೂ, ಒಕ್ಕೂಟದ ಅಧ್ಯಕ್ಷರಿಗೂ ಎಲ್ಲಾ ಸದಸ್ಯರಿಗೂ, ಟ್ರಸ್ಟಿನ ಸಿಬ್ಬಂದಿ ವರ್ಗದವರಿಗೂ ಕ್ರತಜ್ಞತೆ ಸಲ್ಲಿಸಿದರು.


ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು- ಸುಂದರ ಗೌಡ ನಡುಬೈಲು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಸುಂದರ ಗೌಡ ನಡುಬೈಲು ಮಾತನಾಡಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಇದರ 7 ವರ್ಷಗಳ ಕಾಲ ಡಿ ವಿ ಮನೋಹರ್ ಅವರ ಅಧ್ಯಕ್ಷತೆ ಯ ಆಡಳಿತ ಮಂಡಳಿ ಉತ್ತಮ ರೀತಿಯಲ್ಲಿ ಆಡಳಿತ ನಡೆಸಿ ಟ್ರಸ್ಟ್ ನ ಪ್ರಗತಿಯನ್ನು ಸಾಧಿಸಿದ್ದಾರೆ, ಇಂದು ಅಧಿಕಾರ ಸ್ವೀಕರಿಸಿದ ವಿಶ್ವನಾಥ ಗೌಡ ಬನ್ನೂರು ಇವರ ಆಡಳಿತ ಮಂಡಳಿ ಕೂಡ ಟ್ರಸ್ಟ್ ನ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಿ ಎಂದು ಶುಭ ಹಾರೈಸಿ, ಗ್ರಾಮ ಮತ್ತು ತಾಲೂಕು ಮಟ್ಟದಲ್ಲಿ ನಡೆಯುವ ಎಲ್ಲಾ ಸಮಾಜಮುಖಿ ಕಾರ್ಯಕ್ರಮ ಗಳಲ್ಲಿ, ಕೆಲವು ಕಾರ್ಯ ಯೋಜನೆಗಳಲ್ಲಿ ಸಮುದಾಯದ ಪ್ರತಿ ಕುಟುಂಬದ ಮನೆಯವರು ತಮನ್ನು ತಾವು ತೊಡಗಿಸಿಕೊಳ್ಳಬೇಕುಎಂದು ವಿನಂತಿಸಿದರು


ಟ್ರಸ್ಟ್ ಮುನ್ನಡೆಸಲು ಎಲ್ಲಾರ ಸಹಕಾರ ಅಗತ್ಯ – ವಿಶ್ವನಾಥ ಗೌಡ ಬನ್ನೂರು
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ವಿಶ್ವನಾಥ ಗೌಡ ಬನ್ನೂರು ಮುಂದಿನ ಮೂರು ವರ್ಷಗಳ ಅವಧಿಗೆ ಟ್ರಸ್ಟ್ ನ ಪ್ರಗತಿಗೆ ನೂತನ ಆಡಳಿತ ಮಂಡಳಿ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಎಲ್ಲಾರ ಸಹಕಾರ ಅಗತ್ಯ ಎಂದರು.


ವೇದಿಕೆಯಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸ್ಥಾಪಕಧ್ಯಕ್ಷ ಎ ವಿ ನಾರಾಯಣ, ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ ಎಮ್, ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಪ್ರಶಾಂತ್ ಕೆಮ್ಮಾಯಿ, ಮಹಿಳಾ ಘಟಕದ ಅಧ್ಯಕ್ಷರಾದ ಸಂಧ್ಯಾ ಶಶಿಧರ್,ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಚಾರ್ವಕ ಉಪಸ್ಥಿರಿದ್ದರು

ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ
ನಿರ್ಗಮಿತ ಅಧ್ಯಕ್ಷರಾದ ಡಿ ವಿ ಮನೋಹರ್,ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ ಎಮ್, ಉಪಾಧ್ಯಕ್ಷರಾದ ಪ್ರವೀಣ್ ಕುಂಟ್ಯಾನ ಹಾಗೂ ನಿರ್ದೇಶಕರು ನೂತನ ಅಧ್ಯಕ್ಷರಾದ ವಿಶ್ವನಾಥ ಗೌಡ ಬನ್ನೂರು, ಉಪಾಧ್ಯಕ್ಷರಾದ ದಿವ್ಯಶ್ ಕಲ್ಯ, ಕಾರ್ಯದರ್ಶಿ ನಾರಾಯಣ ಗೌಡ ಕುಕ್ಕುತ್ತಡಿ, ಕೋಶಾಧಿಕಾರಿ ಚೆನ್ನಪ್ಪ ಗೌಡ ಕುದುಮಾನ್ ಹಾಗೂ ನಿರ್ದೇಶಕರಿಗೆ ನಿರ್ಣಯ ಪುಸ್ತಕ ಹಸ್ತಾಂತರ ಮಾಡುವ ಮೂಲಕ ಅಧಿಕಾರ ಹಸ್ತಾಂತರ ನಡೆಯಿತು.


ನಿರ್ಗಮಿತ ಅಧ್ಯಕ್ಷರು ಕಾರ್ಯದರ್ಶಿಗೆ ಸನ್ಮಾನ, ನೂತನ ಪದಾಧಿಕಾರಿಗಳಿಗೆ ಹಾಗೂ ನಿರ್ಗಮಿತ ಪದಾಧಿಕಾರಿಗಳಿಗೆ ಗೌರವಾರ್ಪಣೆ
ನಿರ್ಗಮಿತ ಅಧ್ಯಕ್ಷರಾದ ಡಿ ವಿ ಮನೋಹರ್ ಮತ್ತು ಕಾರ್ಯದರ್ಶಿ ದಿವ್ಯಪ್ರಸಾದ್ ಎ ಎಮ್ ಇವರಿಗೆ ಅತಿಥಿಗಳು ಶಾಲು, ಹಾರ ಹಾಕಿ,ಫಲಪುಷ್ಪ ನೀಡಿ ಸನ್ಮಾನಿಸಲಾಯಿತು, ನಿರ್ಗಮಿತ ಗೌರವ ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ಕೆಯ್ಯುರು, ನಾಗಪ್ಪ ಗೌಡ ಬೊಮ್ಮೆಟ್ಟಿ, ಉಪಾಧ್ಯಕ್ಷರಾಗಿದ್ದ ಪ್ರವೀಣ್ ಕುಂಟ್ಯಾನ, ನಿರ್ದೇಶಕರಾಗಿದ್ದ ಚಿದಾನಂದ ಬೈಲಾಡಿ, ಪ್ರಕಾಶ್ ವಲಂಜ ಹಾಗೂ ನೂತನ ಅಧ್ಯಕ್ಷರಾದ ವಿಶ್ವನಾಥ ಗೌಡ ಬನ್ನೂರು, ಉಪಾಧ್ಯಕ್ಷರಾದ ದಿವ್ಯಶ್ ಕಲ್ಯ, ಕಾರ್ಯದರ್ಶಿ ನಾರಾಯಣ ಗೌಡ ಕುಕ್ಕುತ್ತಡಿ, ಕೋಶಾಧಿಕಾರಿ ಚೆನ್ನಪ್ಪ ಗೌಡ ಕುದುಮಾನ್ ನಿರ್ದೇಶಕರಾದ ಎ ವಿ ನಾರಾಯಣ ಗೌಡ, ಡಿ ವಿ ಮನೋಹರ್, ದಿವ್ಯಪ್ರಸಾದ್, ಶ್ರೀಧರ ಗೌಡ ಕಣಜಾಲು, ಉದಯ ಗೌಡ ಕರ್ಮಲ, ಆನಂದ ಮೂವಪ್ಪು, ವಸಂತ ವೀರಮಂಗಳ, ಗೋಪಾಲಕೃಷ್ಣ ಪಟೇಲ್ ಚಾರ್ವಕ,ಲೋಕನಾಥ ಗೌಡ ಕಾಡಮನೆ, ಮುಕುಂದ ಬಜಾತ್ತುರು, ಸುರೇಶ ಗೌಡ ಪುಣಚ, ಪೂವಪ್ಪ ಗೌಡ ಸೂರ್ಯ, ಪುರುಷೋತ್ತಮ ಗೌಡ ಮುಂಗ್ಲಿಮನೆ, ಗೌರಿ ಬನ್ನೂರು, ಸೀತಾರಾಮ ಗೌಡ ಮಿತ್ತಡ್ಕ, ತುಳಸಿ ದೇರಣ್ಣ ಗೌಡ, ಅನಿತಾ ಲಕ್ಷ್ಮಣ ಗೌಡ, ಪದ್ಮಾನಾಭ ಗೌಡ ಬೇರಿಕೆ,ಆನಂದ ಗೌಡ ಹಳೇನೇರೆಂಕಿ, ಸದಾನಂದ ಗೌಡ ಕುಂಟ್ಯಾನ ಇವರುಗಳಿಗೆ ಶಾಲು ಹಾಕಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ಯತೀಶ್ ದೇವ, ಪುತ್ತೂರು ವಲಯ ಉಸ್ತುವಾರಿ ರಾಧಾಕೃಷ್ಣ ನಂದಿಲ,ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಧ್ಯಕ್ಷ ಅಮರನಾಥ್ ಗೌಡ ಬಪ್ಪಳಿಗೆ,ವಿವಾಹ ವೇದಿಕೆಯ ಸಂಚಾಲಕರು ಸುರೇಶ್ ಕಲ್ಲಾರೆ,ಗ್ರಾಮ ಒಕ್ಕೂಟಗಳ ಅಧ್ಯಕ್ಷ, ಪದಾಧಿಕಾರಿಗಳಾದ ಹೂವಪ್ಪ ಗೌಡ ಪರ್ಪುoಜ , ಗಂಗಯ್ಯ ಗೌಡ ಕನ್ನಡಾರು , ಕೇಶವ ಗೌಡ ಕುಂಟಿನಿ , ವೇಣುಗೋಪಾಲ ಕಳುವಾಜೆ, ಲೋಕೇಶ್ ಚಾಕೋಟೆ, ಪದ್ಮನಾಭ ಗೌಡ ಸಿರಿಬಾಗಿಲು , ಬಾಲಕೃಷ್ಣ ಗೌಡ ಮಠ0ದೂರು,ಶಿವಾನಂದ ಕಾಣಿಯೂರು, ಸುಬ್ಬಣ್ಣ ಗೌಡ ಪಾರ ಬೆಟ್ಟಂಪಾಡಿ, ಶ್ರೀನಿವಾಸ ಗೌಡ ಪಾಲಸತ್ತಡ್ಕ , ಚಿಂತನ್ ಮಲುವೇಲು ಬೆಳ್ಳಿಪ್ಪಾಡಿ, ಗಂಗಾಧರ ಗೌಡ ಪೆರಾಜೆ, ರಾಧಾಕೃಷ್ಣ ಗೌಡ ಆರ್ಯಾಪು, ಹರೀಶ್ ಕುರಿಯ, ವನಿತಾ ಮುಂಡೂರು, ಸರಿತಾ ಬನ್ನೂರು, ಶೋಭಾ ಪುತ್ತೂರು, ನಳಿನಾಕ್ಷಿ ಪುತ್ತೂರು, ಪ್ರತಿಭಾ ಬಜತ್ತೂರು, ಗೀತಾ ಬಲ್ನಾಡು, ಅನಿತಾ ಕೋಡಿ೦ಬಾಡಿ,ಲೇಖ ಕಬಕ, ಗಂಗಾಧರ ನರಿಮೊಗರು, ಕುಶಾಲಪ್ಪ ನೆಲ್ಯಾಡಿ, ರಮೇಶ್ ಗೌಡ ಬನ್ನೂರು, ಹರೀಶ್ ದೇಲಂಪಾಡಿ, ಕಲಾವತಿ ಎಸ್ ಗೌಡ ನೆಟ್ಟಣಿಗೆ ಮುಡ್ನೂರು, ವೇದಾವತಿ ಪಿ.ಎಸ್ ಆಲಂಕಾರು, ವನಿತಾ ಆನಂದ ಪುತ್ತೂರು, ಪ್ರಭಾಕರ ಆರ್ಯಾಪು , ಸುಗಂಧಿ ದೋಲ್ಪಾಡಿ, ದುಗ್ಗಪ್ಪ ಗೌಡ ಅಗರ್ತಿಮಾರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಟ್ರಸ್ಟ್ನ ಸಿಬ್ಬಂದಿಗಳಾದ ಪ್ರತಿಭಾ, ಗಣೇಶ್,ಸುಜಾತ, ನಮಿತಾ ಪ್ರಾರ್ಥಿಸಿದರು, ಸಿಬ್ಬಂದಿ ಚಿತ್ರಕಲಾ ಚಿಂತನ ವಾಚಿಸಿದರು, ಮೇಲ್ವಿಚಾರಕರಾದ ವಿಜಯಕುಮಾರ್ ಸ್ವಾಗತಿಸಿದರು, ಕಾರ್ಯದರ್ಶಿ ದಿವ್ಯಪ್ರಸಾದ್ ಎ ಎಮ್ ವರದಿ ವಾಚಿಸಿದರು.ಮೇಲ್ವಿಚಾರಕರು ಸುಮಲತಾ ಕಾರ್ಯಕ್ರಮ ನಿರ್ವಹಿಸಿದರು, ಟ್ರಸ್ಟ್ ಮೆನೇಜರ್ ಸುನಿಲ್ ಕುಮಾರ್, ಸಿಬ್ಬಂದಿಗಳಾದ ಚರಣ್,ಪರಮೇಶ್ವರ ಗೌಡ, ಶ್ರೀಕಾಂತ್,ಲಲಿತ, ಚಂದನ್,ಪುಷ್ಪಲತಾ, ಶ್ವೇತಾ ಸಹಕರಿಸಿದರು.


ಒಕ್ಕಲಿಗ ಸ್ವ ಸಹಾಯ ಒಕ್ಕೂಟಗಳ ಕೇಂದ್ರ ಒಕ್ಕೂಟ ಸಭೆ
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧಿಕಾರ ಹಸ್ತಾಂತರ ಕಾರ್ಯಕ್ರಮದ ಬಳಿಕ ಒಕ್ಕಲಿಗ ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಸಭೆ ಕೇಂದ್ರ ಒಕ್ಕೂಟ ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು, ವಲಯಧ್ಯಕ್ಷರುಗಳು, ಒಕ್ಕೂಟ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here