







ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರ ಪ್ರಮಾಣ ಪತ್ರ ಶಿಬಿರ ನಡೆಯಿತು.
ಜು.10ರಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಯದುರಾಜ್ ಡಿ.ಕೆ ರವರ ಅಧ್ಯಕ್ಷತೆಯಲ್ಲಿ ಶಿಬಿರ ನಡೆಯಿತು. ಶಿಬಿರದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಎಲುಬು-ಕೀಲು ತಜ್ಞ ಡಾ. ಅಜಯ್ ಎಂ.ಬಿ, ಹಿರಿಯ ಫಿಸಿಷಿಯನ್ ಡಾ. ಯದುರಾಜ್ ಡಿ.ಕೆ, ಮಕ್ಕಳ ಹಿರಿಯ ತಜ್ಞ ಡಾ. ಪ್ರಶಾಂತ್, ಕಿವಿ-ಮೂಗು-ಗಂಟಲು ತಜ್ಞ ಡಾ. ಪುಷ್ಪಲತಾ.ಎನ್ ಮತ್ತು ನೇತ್ರ ತಜ್ಞೆ ಡಾ. ಅನಿತಾ ಕಿರಣ್ ರವರು ಅರ್ಹ ವಿಕಲಚೇತನರನ್ನು ತಪಾಸಣೆ ನಡೆಸಿ ಪ್ರಮಾಣ ಪತ್ರ ನೀಡಿದರು.



ಪುತ್ತೂರು ಮತ್ತು ಕಡಬ ತಾಲೂಕು ಸೇರಿ ಒಟ್ಟು 20 ಮಂದಿ ವಿಕಲಚೇತನರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಶಿಬಿರದಲ್ಲಿ ಪುತ್ತೂರು ತಾಲೂಕು ಪಂಚಾಯತ್ ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಹಾಗೂ ಪುತ್ತೂರು ಮತ್ತು ಕಡಬ ತಾಲೂಕಿನ ವಿಕಲಚೇತನರ ಇಲಾಖೆಯ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರು ಸಹಕರಿಸಿದರು.












