







ಈಶ್ವರಮಂಗಲ: ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೃತ್ಯೋಹಂ ಸಂಸ್ಥೆಯ ಸಹಯೋಗದೊಂದಿಗೆ ಭರತನಾಟ್ಯ ತರಗತಿಗೆ ಚಾಲನೆ ನೀಡಲಾಯಿತು.


ಜು.10ರಂದು ನಡೆದ ಕಾರ್ಯಕ್ರಮದಲ್ಲಿ ನೃತ್ಯೋಹಂ ಸಂಸ್ಥೆಯ ಶಾಲಿನಿ ಆತ್ಮ ಭೂಷಣ್ ಅವರು ಭರತನಾಟ್ಯ ತರಗತಿಯನ್ನು ಉದ್ಘಾಟಿಸಿದರು. ಕಳೆದ ಕೆಲವು ವರ್ಷಗಳಿಂದ ಅವರು ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕಿಯರಾದ ರಾಜಶ್ರೀ, ಪ್ರಮೀಳ, ಸೌಮ್ಯ ಕೆ.ಎಚ್. ಉಪಸ್ಥಿತರಿದ್ದರು.













