







ಪುತ್ತೂರು: ವಿಧಾನಸಭಾ ಕ್ಷೇತ್ರ ಜೆಡಿಎಸ್ ಮಹಿಳಾ ಘಟಕದ ಸಭೆ ಜು.12ರಂದು ಬೊಳುವಾರು ವೆಲ್ನೆಸ್ ಕೇರ್ ಸೆಂಟರ್ ನಲ್ಲಿ ನಡೆಯಿತು. ಪಕ್ಷದ ಬಲವರ್ಧನೆಗೆ ಒತ್ತು ಕೊಡುವ ನಿಟ್ಟಿನಲ್ಲಿ ನಡೆಸಲಾದ ಈ ಸಭೆಯಲ್ಲಿ ಕೆಲವು ಮಹಿಳೆಯರನ್ನು ಸೇರ್ಪಡೆ ಮಾಡಲಾಯಿತು.


ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಮೀಜಾ ಭಾನು, ಕಾರ್ಯಾಧ್ಯಕ್ಷೆ ಪ್ರಿಯಾ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಜ್ಯೋತಿಕಾ ಜೈನ್, ಉಪಾಧ್ಯಕ್ಷರಾದ ಚೂಡಾಮಣಿ, ಶಾರದಾ ಶೆಟ್ಟಿ, ಪುತ್ತೂರು ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ್, ಜಿಲ್ಲಾ ಜಾತ್ಯತೀತ ಜನತಾದಳದ ಮಹಾ ಪ್ರಧಾನ ಕಾರ್ಯದರ್ಶಿ ಯೋಗೇಶ್ ಶೆಟ್ಟಿ, ರಾಜ್ಯ ಮೀನುಗಾರ ಘಟಕದ ರತ್ನಾಕರ್ ಸುವರ್ಣ, ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಪ್ರಭಾಕರ್ ಸಾಲಿಯಾನ್, ಪುತ್ತೂರು ಯುವ ಘಟಕದ ಅಧ್ಯಕ್ಷ ಶಿವ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.













